×
Ad

ಮಾಜಿ ಸೈನಿಕರ ಸೇವೆಗಳನ್ನು ಪಡೆಯಲು ಅರ್ಜಿ ಆಹ್ವಾನ

Update: 2020-10-09 20:08 IST

ಉಡುಪಿ, ಅ.9: ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯಿಂದ ನೀಡಲಾಗುವ ಸೇವೆಗಳಾದ ಮಾಜಿ ಸೈನಿಕರಿಗೆ / ಮೃತ ಮಾಜಿ ಸೈನಿಕರ ಪತ್ನಿಗೆ ಗುರುತಿನ ಚೀಟಿ ವಿತರಿಸುವುದು, ಉದ್ಯೋಗ ನೋಂದಣಿ, ಸಿಇಟಿ ಪ್ರಮಾಣ ಪತ್ರ, ಕನ್ನಡಕ ಅನುದಾನ, ಮದುವೆ ಅನುದಾನ ಹಾಗೂ ಮನೆ ದುರಸ್ಥಿ ಅನುದಾವನ್ನು ಸಕಾಲದಡಿ ಅಧಿಸೂಚಿಸಲಾಗಿದೆ.

ಈ ಸೇವೆಗಳನ್ನು ಪಡೆಯಲು ಅರ್ಜಿಯನ್ನು ಸೇವಾಸಿಂಧು - www.sakala.kar.nic.in - ಜಾಲತಾಣದಲ್ಲಿ ಸಲ್ಲಿಸುವಂತೆ ಜಂಟಿ ನಿರ್ದೇಶಕರ ಕಾರ್ಯಾಲಯ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಮಂಗಳೂರು ಇವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News