×
Ad

ಮಾಂಸಹಾರಿ ತ್ಯಾಜ್ಯಗಳಿಂದ ಉತ್ತಮ ಗುಣಮಟ್ಟದ ಗೊಬ್ಬರ ತಯಾರಿ: ಡಾ. ಚೆರಿಯನ್

Update: 2020-10-09 20:16 IST

ಉಡುಪಿ, ಅ.9: ಸಂಭಾವ್ಯ ಸಂಪನ್ಮೂಲಗಳಾಗಿರುವ ಕೋಳಿ ಮತ್ತು ಮೀನಿ ನಂತಹ ಮಾಂಸಹಾರಿ ತ್ಯಾಜ್ಯಗಳಿಂದ ಸಾವಯವ ಕೃಷಿಗೆ ಬಳಕೆ ಮಾಡಲು ಗುಣಮಟ್ಟದ ಗೊಬ್ಬರವನ್ನು ತಯಾರಿಸಬಹುದು ಎಂದು ಪರಿಸರ ವಿಜ್ಞಾನಿ, ಸಾವಯವ ಕೃಷಿಕ ಡಾ. ರೊಶಿ ಚೆರಿಯನ್ ತಿಳಿಸಿದ್ದಾರೆ.

ಉಡುಪಿ ನಗರಸಭೆ ವತಿಯಿಂದ ಶುಕ್ರವಾರ ಮಣಿಪಾಲ ರಜತಾದ್ರಿಯಲ್ಲಿ ರುವ ಉಡುಪಿ ಜಿಪಂ ಸಭಾಂಗಣದಲ್ಲಿ ಏರ್ಪಡಿಸಲಾದ ಘನ ತ್ಯಾಜ್ಯ ನಿರ್ವಹಣೆ (ವಿಂಡ್ರೊ ಕಂಪೋಸ್ಟಿಂಗ್) ಕುರಿತ ಕಾರ್ಯಾಗಾರದಲ್ಲಿ ಭಾವಹಿಸಿ ಅವರು ಮಾತನಾಡುತಿದ್ದರು.

ಹೊಟೇಲ್, ಮನೆಗಳು, ಕೋಳಿ, ಮಾಂಸ, ಮೀನು ಮಾರುಕಟ್ಟೆ ಅಂಗಡಿ ಗಳಲ್ಲಿ ಇಂದು ಸಾಕಷ್ಟು ಪ್ರಮಾಣದಲ್ಲಿ ಮಾಂಸಹಾರಿ ತ್ಯಾಜ್ಯಗಳು ಉತ್ಪಾದನೆ ಯಾಗುತ್ತಿದ್ದು, ಇದನ್ನು ವ್ಯವಸ್ಥಿತವಾಗಿ ನಿರ್ವಹಿಸುವ ಮೂಲಕ ಸಂಪನ್ಮೂಲ ವಾಗಿ ಪರಿವರ್ತಿಸಬಹುದಾಗಿದೆ. ಇದರಿಂದ ಉತ್ತಮ ಗುಣಮಟ್ಟದ ಗೊಬ್ಬರ ಪಡೆಯಬಹುದು. ಇದು ಮಣ್ಣಿನ ಆರೋಗ್ಯ ಕಾಪಾಡುವಲ್ಲಿಯೂ ಮಹತ್ವದ ಪಾತ್ರ ವಹಿಸಲಿದೆ ಎಂದರು.

ಇದು ಕೋಳಿ, ಮೀನು ಮಾಂಸ ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಪರ್ಯಾಯ ಮಾರ್ಗ ಮತ್ತು ಪರಿಸರ, ಮನುಷ್ಯನ ಆರೋಗ್ಯಕ್ಕೂ ಉತ್ತಮ ಚಿಂತನೆ ಯಾಗಿದೆ.ಈ ಕಂಪೋಸ್ಟ್ ವಿಧಾನದ ಗೊಬ್ಬರ ಬಳಕೆ ಮಾಡುವುದರಿಂದ ಕೃಷಿ ಕರು ಹೆಚ್ಚಿನ ಪ್ರಮಾಣದಲ್ಲಿ ಇಳುವರಿ ಪಡೆಯಬಹುದಾಗಿದೆ ಎಂದು ಅವರು ಅಭಿಪ್ರಾಯ ಪಟ್ಟರು.

ಕಾರ್ಯಾಗಾರದಲ್ಲಿ ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿ ಕಾರಿ ಶ್ರೀನಿವಾಸ್ ರಾವ್, ನಗರಸಭೆ ಪೌರಾಯುಕ್ತ ಆನಂದ್ ಸಿ.ಕಲ್ಲೋಳಿಕರ್ ಹಾಗೂ ಸ್ಥಳೀಯಾಡಳಿತ ಸಂಸ್ಥೆಗಳ ಮುಖ್ಯಾಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News