×
Ad

ಶಾಲೆಗಳ ಆರಂಭಕ್ಕೆ ಆತುರ ಬೇಡ: ಮೊಯಿದಿನಬ್ಬ

Update: 2020-10-09 20:18 IST

ಉಡುಪಿ, ಅ.9: ಶಾಲೆಗಳ ಆರಂಭಕ್ಕೆ ಸರಕಾರ ಆತುರ ಪಡಬಾರದು. ಯಾವುದೋ ಒತ್ತಡಕ್ಕೆ ಮಣಿದು ಕೊರೋನ ಸೋಂಕು ಹಿಡಿತಕ್ಕೆ ಬರುವ ಮೊದಲೇ ಶಾಲೆಗಳನ್ನು ತೆರೆದು ವಿದ್ಯಾರ್ಥಿಗಳ ಶಿಕ್ಷಕರ ಜೀವಕ್ಕೆ ಅಪಾಯ ತಂದೊಡ್ಡುವ ಕೆಲಸಕ್ಕೆ ಸರಕಾರ ಕೈ ಹಾಕಬಾರದು ಎಂದು ಶಂಸುಲ್ ಉಲಮಾ ಧಾರ್ಮಿಕ ಮತ್ತು ಲೌಕಿಕ ಶಿಕ್ಷಣ ಅಕಾಡೆಮಿ ಪ್ರಧಾನ ಕಾರ್ಯದರ್ಶಿ ಎಂ.ಪಿ. ಮೊಯಿದಿನಬ್ಬ ಆಗ್ರಹಿಸಿದ್ದಾರೆ.

ಉಡುಪಿ ಜಿಲ್ಲಾದ್ಯಂತ ಕಳೆದ ಒಂದು ತಿಂಗಳಿನಿಂದ ದೇವಸ್ಥಾನದ ಅಂಗಣ, ಅಂಗನವಾಡಿ ಕೇಂದ್ರದ ಜಗಲಿಯಲ್ಲಿ, ಕೆಲವು ಖಾಸಗಿಯವರ ಮನೆಗಳಲ್ಲಿ ಮಕ್ಕಳನ್ನು ಸೇರಿಸಿ ತರಗತಿ ನಡೆಸಲಾಗುತ್ತಿದೆ. ಸಾಮಾಜಿಕ ಅಂತರ, ಮಾಸ್ಕ್ ಯಾವುದೂ ಇಲ್ಲದೇ ಮಕ್ಕಳು ರಾಶಿ ಬಿದ್ದು ಕೊಂಡು ಕಲಿಯುತ್ತಿರುವ ದೃಶ್ಯ ಭಯ ಹುಟ್ಟಿಸುವಂತಿದೆ. ಇದನ್ನು ಮೊದಲು ನಿಲ್ಲಿಸಿ ಈ ರೀತಿ ತರಗತಿ ನಡೆಸುವವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News