ಮಾದಕ ವಸ್ತು ಮಾರಾಟ ಆರೋಪ : 6 ಮಂದಿ ಸೆರೆ
Update: 2020-10-09 22:34 IST
ಮಂಗಳೂರು, ಅ.9: ನಗರದಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ 6 ಮಂದಿಯನ್ನು ದ.ಕ. ಜಿಲ್ಲಾ ಅಬಕಾರಿ ಇಲಾಖೆ ಅಧಿಕಾರಿಗಳು ಬಂಧಿಸಿ 1.50 ಗ್ರಾಂ ಎಂಡಿಎಂಎ, 100 ಗ್ರಾಂ ಗಾಂಜಾ ಮತ್ತು ಒಂದು ದ್ವಿಚಕ್ರವಾಹನ ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನು ಅಲನ್, ವಿವೇಕ್, ಅಮೃತಾ ವಾಸ್, ಸಚಿನ್, ರೋಹನ್, ನಭಾ ಎಂದು ಗುರುತಿಸಲಾಗಿದೆ.
ಅಬಕಾರಿ ಇಲಾಖೆ ಅಧಿಕಾರಿಗಳು ಬುಧವಾರ ಮಂಗಳೂರು ದಕ್ಷಿಣ ವಲಯ-1 ವ್ಯಾಪ್ತಿಯಲ್ಲಿ ದಾಳಿ ನಡೆಸಿದ್ದರು. ಕಾರ್ಯಾಚರಣೆಯಲ್ಲಿ ಅಬಕಾರಿ ನಿರೀಕ್ಷಕರಾದ ಸೀಮಾ, ಪ್ರತಿಭಾ ಜಿ. ಕಮಲ ಎಚ್.ಎನ್. ಸಿಬ್ಬಂದಿ ಸಂತೋಷ್ ಕುಮಾರ್, ಸುನೀಲ್ ಬೈಂದೂರು, ಉಮೇಶ್, ಕುಮಾರ್, ವಿನಿತಾ, ಸಂದೀಪ್ ಕುಮಾರ್, ಮನ್‌ಮಹೋಹನ್ ಪಾಲ್ಗೊಂಡಿದ್ದರು.