×
Ad

ಕಿರ್ಗಿಸ್ತಾನ್‌ನಲ್ಲಿ ಹಬ್ಬಿದ ಹಿಂಸಾತ್ಮಕ ಪ್ರತಿಭಟನೆ: ರಾಜಧಾನಿಯಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ ಅಧ್ಯಕ್ಷ

Update: 2020-10-09 23:24 IST

ಬಿಶ್ಕೇಕ್ (ಕಿರ್ಗಿಸ್ತಾನ್), ಅ. 9: ಮಧ್ಯ ಏಶ್ಯದ ದೇಶ ಕಿರ್ಗಿಸ್ತಾನ್‌ನಲ್ಲಿ ಪ್ರತಿಭಟನೆಗಳು ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ, ಅಧ್ಯಕ್ಷ ಸೂರೊಂಬೆ ಜೀನ್‌ಬೆಕೊವ್ ರಾಜಧಾನಿ ಬಿಶ್ಕೇಕ್‌ನಲ್ಲಿ ಶುಕ್ರವಾರ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ.

ಶುಕ್ರವಾರದಿಂದ ಅಕ್ಟೋಬರ್ 21ರವರೆಗೆ ನಗರದಲ್ಲಿ ಕರ್ಫ್ಯೂ ಮತ್ತು ಕಟ್ಟುನಿಟ್ಟಿನ ಭದ್ರತಾ ಕ್ರಮಗಳು ಜಾರಿಯಲ್ಲಿರುತ್ತವೆ.

ಅಕ್ಟೋಬರ್ 4ರಂದು ನಡೆದ ವಿವಾದಾತ್ಮಕ ಚುನಾವಣೆಯ ಬಳಿಕ ದೇಶದಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ ಹಾಗೂ ಅಶಾಂತಿ ಹಬ್ಬಿದೆ. ಹಿಂಸಾತ್ಮಕ ಪ್ರತಿಭಟನೆಗಳ ವೇಳೆ ಕನಿಷ್ಠ ಓರ್ವ ಮೃತಪಟ್ಟಿದ್ದು, ನೂರಾರು ಮಂದಿ ಗಾಯಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News