2020 ಗ್ರಾಮ ಪಂಚಾಯತ್ ಚುನಾವಣೆಗೆ ಬಡಗಕಜೆಕಾರು ಎಸ್ ಡಿ ಪಿ ಐ ಅಭ್ಯರ್ಥಿಗಳ ಪ್ರಥಮ ಪಟ್ಟಿ ಪ್ರಕಟ
ಬಂಟ್ವಾಳ : ಮುಂಬರುವ ಪಂಚಾಯತ್ ಚುನಾವಣೆಯ ಬಡಗಕಜೆಕಾರು ಗ್ರಾಮದ ಪಕ್ಷದ ಅಭ್ಯರ್ಥಿಗಳ ಘೋಷಣಾ ಕಾರ್ಯಕ್ರಮ ಇಂದು ಪಾಂಡವರಕಲ್ಲುವಿನ ಸಮುದಾಯ ಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿ ಪಿ ಐ ಕಾವಳ ಪಡೂರು - ಮೂಡೂರು ವಲಯಾಧ್ಯಕ್ಷರಾದ ಅಬೂಬಕ್ಕರ್ ಮದ್ದ ವಹಿಸಿದ್ದರು. ಎಸ್ ಡಿ ಪಿ ಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ಅಧ್ಯಕ್ಷರಾದ ಯೂಸುಫ್ ಆಲಡ್ಕರವರು ಪ್ರಾಸ್ತಾವಿಕವಾಗಿ ಮಾತನಾಡಿ ಅಭ್ಯರ್ಥಿ ಘೋಷಣೆ ಮಾಡಿದರು. ಎಸ್ ಡಿ ಪಿ ಐ ಕರ್ನಾಟಕ ರಾಜ್ಯ ಸಮಿತಿ ಸದಸ್ಯರಾದ ರಿಯಾಝ್ ಫರಂಗಿಪೇಟೆ ಸಂದೇಶ ಭಾಷಣಮಾಡಿದರು.
ಜಮಾಅತ್ ನ ಮಾಜಿ ಮುಖಂಡರೂ, ಸಾಮಾಜಿಕ ಕಾರ್ಯಕರ್ತರಾದ ಉಮರ್ ಕೆ ಪಿ ಮುಸ್ಲಿಯಾರ್ ಪಕ್ಷದ ಸಿದ್ಧಾಂತ ಮತ್ತು ತತ್ವವನ್ನು ಒಪ್ಪಿಕೊಂಡು ಪಕ್ಷಕ್ಕೆ ಸೇರ್ಪಡೆಗೊಂಡು ಒಂದೆರಡು ಹಿತವನ್ನು ನುಡಿದರು. ಪ್ರಥಮ ಹಂತದಲ್ಲಿ ಎರಡು ವಾರ್ಡ್ ಗಳಲ್ಲಿ ಸ್ಪರ್ಧಿಸುವುದಾಗಿ ತೀರ್ಮಾನಿಸಲಾಯಿತು.
ಅಭ್ಯರ್ಥಿ ಪಟ್ಟಿ ಪ್ರಕಟ:
86 ವಾರ್ಡ್(2 ಅಭ್ಯರ್ಥಿ) - ಅಥಾವುಲ್ಲಾ ಕೆದಿಲೆ
ಸಮೀರಾ w/o ಹನೀಫ್ ಕೊಮಿನಡ್ಕ
87 ವಾರ್ಡ್ -(1 ಅಭ್ಯರ್ಥಿ)ನಸೀಮಾ w/o ಹಂಝ ಪಾಂಡವರಕಲ್ಲು
ಎಸ್ ಡಿ ಪಿ ಐ ಬಡಗಕಜೆಕಾರು ಗ್ರಾಮ ಸಮಿತಿ ಅಧ್ಯಕ್ಷರಾದ ಅಥಾವುಲ್ಲಾ ಕೆದಿಲೆ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಎಸ್ ಡಿ ಪಿ ಐ ಬಡಗಕಜೆಕಾರು ಗ್ರಾಮ ಸಮಿತಿ ಉಪಾಧ್ಯಕ್ಷ ಉಸ್ಮಾನ್ ಕೆಪಿ,ಕಾರ್ಯದರ್ಶಿ ಹನೀಫ್ ಕೊಮಿನಡ್ಕ ಉಪಸ್ಥಿತರಿದ್ದರು. ಇಮ್ರಾನ್ ಪಾಂಡವರಕಲ್ಲು ನಿರೂಪಿಸಿ, ವಂದಿಸಿದರು.