ಚೀನಾದ ವಾವೆ ಕಂಪನಿಯಿಂದ ಭಾರತಕ್ಕೆ 5ಜಿ ತಂತ್ರಜ್ಞಾನ ಮಾರಾಟದ ಬಗ್ಗೆ ಮಾಜಿ ರಾ ಮುಖ್ಯಸ್ಥರ ಎಚ್ಚರಿಕೆ

Update: 2020-10-10 16:16 GMT
photo :twitter.com

 ಹೊಸದಿಲ್ಲಿ,ಅ.10: ಚೀನಾದ ಪ್ರಮುಖ ಟೆಲಿಕಾಂ ಸಂಸ್ಥೆ ಹುವೈ ಭಾರತದ ಪ್ರಮುಖ ಮೂಲಸೌಕರ್ಯಗಳಲ್ಲಿ ಕಾರ್ಯಾಚರಣೆಯನ್ನು ಆರಂಭಿಸಲು ಅನುಮತಿ ನೀಡುವುದು ಅತ್ಯಂತ ಅಪಾಯಕಾರಿಯಾಗುತ್ತದೆ ಎನ್ನಲು ವ್ಯೂಹಾತ್ಮಕ, ತಾಂತ್ರಿಕ, ಭೂರಾಜಕೀಯ ಮತ್ತು ಕಾನೂನು ಸೇರಿದಂತೆ ಹಲವಾರು ಪ್ರಬಲ ಕಾರಣಗಳಿವೆ ಎಂದು ಮಾಜಿ ರಾ ಮುಖ್ಯಸ್ಥ ವಿಕ್ರಮ ಸೂದ್ ಅವರು ಎಚ್ಚರಿಕೆ ನೀಡಿದ್ದಾರೆ. ವಾವೆ ಚೀನಿ ಸರಕಾರದಿಂದ ಬೆಂಬಲಿತ ಕಂಪನಿಯಾಗಿದೆ.

5ಜಿ ಟ್ರಯಲ್‌ಗಳನ್ನು ಆರಂಭಿಸಲು ಸ್ಪೆಕ್ಟ್ರಮ್‌ಗಾಗಿ ವಾವೆ ಅರ್ಜಿ ಸಲ್ಲಿಸಿದೆಯಾದರೂ ಅದಕ್ಕೆ ರೇಡಿಯೊ ತರಂಗಾಂತರಗಳನ್ನು ಹಂಚಿಕೆ ಮಾಡುವ ಬಗ್ಗೆ ಸರಕಾರವು ಈವರೆಗೆ ಯಾವುದೇ ಅಂತಿಮ ನಿರ್ಧಾರವನ್ನು ಕೈಗೊಂಡಿಲ್ಲ.

 ವಾವೆ ತಾನು ಸ್ವತಂತ್ರ ಕಂಪನಿ ಎಂದು ಸೋಗು ಹಾಕಲು ಬಯಸಿರಬಹುದು,ಆದರೆ ವಾಸ್ತವದಲ್ಲಿ ಹಾಗಿಲ್ಲ ಎನ್ನುವುದು ಉದ್ಯಮ ದಲ್ಲಿರುವವರಿಗೆ ಗೊತ್ತಿದೆ. ಚೀನಿ ಸರಕಾರವು ವಾವೆ  ಗೆ ಹಣಕಾಸು ನೆರವು ಒದಗಿಸಿತ್ತು ಮತ್ತು ಅದು ಅಮೆರಿಕದಲ್ಲಿ ಭೌದ್ಧಿಕ ಆಸ್ತಿ ಕಳ್ಳತನ ಮಾಡಲು ನೆರವಾಗಿತ್ತು ಎಂದು ಸೂದ್ ಇತ್ತೀಚಿಗಷ್ಟೇ ಬಿಡುಗಡೆಗೊಂಡಿರುವ ‘ದಿ ಅಲ್ಟಿಮೇಟ್ ಗೋಲ್:ಎ ಫಾರ್ಮರ್ ರಾ ಚೀಫ್ ಡಿಕನ್‌ಸ್ಟ್ರಕ್ಸ್ ಹೌ ನೇಷನ್ಸ್ ಕನ್‌ಸ್ಟ್ರಕ್ಸ್ ನೆರೇಟಿವ್ಸ್ ’ಕೃತಿಯಲ್ಲಿ ಬರೆದಿದ್ದಾರೆ.

ಕೋವಿಡ್ ಬಳಿಕ ಚೀನಾ ಹೇಗೆ ತನ್ನ ಜವಾಬ್ದಾರಿಯುತ ರಾಷ್ಟ್ರವೆಂಬ ವರ್ಚಸ್ಸು ಕಳೆದುಕೊಂಡಿದೆ ಎನ್ನುವುದನ್ನೂ ವಿವರಿಸಿರುವ ಸೂದ್,ದೃಷ್ಟಿಕೋನದಲ್ಲಿಯ ಈ ಬದಲಾವಣೆಯು ವಾವೆ 5 ಜಿ ತಂತ್ರಜ್ಞಾನವನ್ನು ಮಾರಾಟ ಮಾಡಲು ಅದರ ಪ್ರಯತ್ನಗಳಂತಹ ಚೀನಿ ಕಾರ್ಪೊರೇಟ್ ಹಿತಾಸಕ್ತಿಗಳಿಗೆ ಹಾನಿಯನ್ನುಂಟು ಮಾಡುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.

    ರಹಸ್ಯಗಳ ಕಳ್ಳತನ ಶಾಸನಬದ್ಧ ಗುಪ್ತಚರ ಚಟುವಟಿಕೆಯ ಅಂಗವಾಗಿದೆ ಎಂದು ಪರಿಗಣಿಸಿರುವ ಚೀನಾ ಭಾರತದ ಬಗ್ಗೆ ಅದೇ ನಿಲುವು ಹೊಂದಿರುವುದು ಮತ್ತು ಅದು ದೇಶದ ಹಿತಾಸಕ್ತಿಗಳಿಗೆ ಹಾನಿಯನ್ನುಂಟು ಮಾಡಲು ಗಡಿಯಲ್ಲಿ ಸತತ ಬಿಕ್ಕಟ್ಟುಗಳನ್ನು ಸೃಷ್ಟಿಸುತ್ತಿರುವುದು ಅದು ಹುವೈ ಬಗ್ಗೆ ಜಾಗರೂಕವಾಗಿರುವಂತೆ ಮಾಡಿದೆ ಎಂದು 31 ವರ್ಷಗಳ ಸೇವೆಯ ಬಳಿಕ 2003,ಮಾರ್ಚ್‌ನಲ್ಲಿ ನಿವೃತ್ತರಾಗಿರುವ ಸೂದ್ ತನ್ನ ಕೃತಿಯಲ್ಲಿ ತಿಳಿಸಿದ್ದಾರೆ.

ಚೀನಾ ಭಾರತದ ಕುರಿತು ತನ್ನ ಕಥನಗಳನ್ನು ಬದಲಿಸದಿದ್ದರೆ ಮತ್ತು ಹಾಗೆ ಮಾಡಿದ್ದರೆ ಅದಕ್ಕೆ ಸಾಕ್ಷಾಧಾರಗಳನ್ನು ಒದಗಿಸದಿದ್ದರೆ ಹುವೈ ಅಥವಾ ಅಂತಹುದೇ ಚೀನಿ ಕೊಡುಗೆಗಳ ಬಗ್ಗೆ ಎಚ್ಚರಿಕೆಯಿಂದಿರುವುದು ದೇಶದ ಬುದ್ಧಿವಂತಿಕೆಯಾಗುತ್ತದೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News