ನವೆಂಬರ್ 24ರ ಒಳಗೆ ಹಾಜರಾಗಿ: ನವಾಝ್ ಶರೀಫ್‌ಗೆ ಇಸ್ಲಾಮಾಬಾದ್ ಹೈಕೋರ್ಟ್ ಆದೇಶ

Update: 2020-10-10 18:03 GMT

ಇಸ್ಲಾಮಾಬಾದ್, ಅ. 10: ತನ್ನೆದುರು ನವೆಂಬರ್ 24ರ ಒಳಗೆ ಹಾಜರಾಗುವಂತೆ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಝ್ ಶರೀಫ್‌ಗೆ ಇಸ್ಲಾಮಾಬಾದ್ ಹೈಕೋರ್ಟ್ ಆದೇಶ ನೀಡಿದೆ ಎಂದು ‘ಡಾನ್ ನ್ಯೂಸ್’ ವರದಿ ಮಾಡಿದೆ.

ಹಾಜರಾಗಲು ವಿಫಲವಾದರೆ ಮಾಜಿ ಪ್ರಧಾನಿಯನ್ನು ‘ಘೋಷಿತ ಅಪರಾಧಿ’ ಎಂಬುದಾಗಿ ಘೋಷಿಸಲಾಗುವುದು ಎಂದು ನ್ಯಾಯಾಲಯ ಎಚ್ಚರಿಸಿದೆ. ಶರೀಫ್ ತನ್ನ ಲಂಡನ್‌ನ ನಿವಾಸದಲ್ಲಿ ಜಾಮೀನುರಹಿತ ಬಂಧನ ವಾರಂಟನ್ನು ಸ್ವೀಕರಿಸಲು ನಿರಾಕರಿಸಿದರೆನ್ನಲಾದ ಘಟನೆಯ ಬಳಿಕ ನ್ಯಾಯಾಲಯ ಈ ಎಚ್ಚರಿಕೆ ನೀಡಿದೆ.

ಅಲ್-ಅಝೀಝಿಯ ಮತ್ತು ಆ್ಯವನ್‌ಫೀಲ್ಡ್ ಭ್ರಷ್ಟಾಚಾರ ಪ್ರಕರಣಗಳಲ್ಲಿ ನವಾಝ್ ಶರೀಫ್ ಸಲ್ಲಿಸಿರುವ ಮನವಿಯ ಕುರಿತ ಕಲಾಪಗಳಿಗೆ ಸಂಬಂಧಿಸಿ ಇಸ್ಲಾಮಾಬಾದ್ ಹೈಕೋರ್ಟ್‌ನ ರಿಜಿಸ್ಟ್ರಾರ್ ಶನಿವಾರ ಲಿಖಿತ ಆದೇಶ ಹೊರಡಿಸಿದರು ಎಂದು ‘ಡಾನ್ ನ್ಯೂಸ್’ ತಿಳಿಸಿದೆ.

ಅಕ್ಟೋಬರ್ 7ರಂದು ನ್ಯಾಯಾಲಯವು ಪ್ರಥಮ ಕಾರ್ಯದರ್ಶಿ (ಕೌನ್ಸುಲರ್ ವ್ಯವಹಾರಗಳು), ರಾವ್ ಅಬ್ದುಲ್ ಹನ್ನನ್ (ಲಂಡನ್‌ನಲ್ಲಿರುವ ಪಾಕಿಸ್ತಾನ್ ಹೈಕಮಿಶನ್‌ನ ಕೌನ್ಸುಲರ್ ಅಟಾಶೆ ಮತ್ತು ವಿದೇಶ ಸಚಿವಾಲಯದಲ್ಲಿ ಯುರೋಪ್-1ರ ನಿರ್ದೇಶಕ ಮುಹಮ್ಮದ್ ಮುಬಶಿರ್ ಖಾನ್‌ರ ಹೇಳಿಕೆಗಳನ್ನು ದಾಖಲಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News