ಶಂಕರಪುರ ವಿಶ್ವಾಸದಮನೆಗೆ ಅಗತ್ಯ ಸಾಮಗ್ರಿಗಳ ಕೊಡುಗೆ

Update: 2020-10-11 14:15 GMT

ಶಿರ್ವ, ಅ.11: ಉಡುಪಿ ಕನ್ನರ್ಪಾಡಿಯ ಸೈಂಟ್ ಮೇರೀಸ್ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿಗಳ ವತಿಯಿಂದ ಶಂಕರಪುರ ವಿಶ್ವಾಸದಮನೆ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ಬಟ್ಟೆ, ಹಣ್ಣು, ತರಕಾರಿ, ದಿನಸಿ ಇನ್ನಿತರ ದಿನಬಳಕೆಯ ಉಪಯುಕ್ತ ಸಾಮಗ್ರಿಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಶಾಲಾ ಮುಖ್ಯಸ್ಥ, ಧರ್ಮಗುರು ಫಾ. ಜಾನ್ಸನ್ ಸಿಕ್ವೇರಾ, ಸಮಾಜದಲ್ಲಿ ಆಶ್ರಯವಿಲ್ಲದೆ ಬೀದಿಗೆ ಬಿದ್ದ ದೀನ ದುರ್ಬಲರ ಕಲ್ಯಾಣಕ್ಕಾಗಿ ಸರಕಾರದ ಅನುದಾನವಿಲ್ಲದೆ ವಿಶ್ವಾಸದಮನೆ ಸಂಸ್ಥೆಯು ಕಳೆದ 20ವರ್ಷಗಳಿಂದ ದುಡಿಯುತ್ತಿದ್ದು, ಈ ಸಂಸ್ಥೆಯ ಸಮಾಜ ಮುಖಿ ಕೆಲಸ ಕಾರ್ಯಗಳನ್ನು ಸರಕಾರ ಗುರುತಿಸುವಂತಾಗಬೇಕು ಎಂದು ಹೇಳಿದರು.

ಕೊಡುಗೆಗಳನ್ನು ಸ್ವೀಕರಿಸಿದ ವಿಶ್ವಾಸದಮನೆಯ ಮುಖ್ಯಸ್ಥರಾದ ಪಾಸ್ಟರ್ ಸುನಿಲ್ ಜಾನ್ ಡಿಸೋಜ ಮಾತನಾಡಿ, ವಿಶ್ವಾಸದ ಮನೆ ಸೇವಾ ಸಂಸ್ಥೆಯು ಈ ಮಟ್ಟದಲ್ಲಿ ಬೆಳೆಯಲು ವಿವಿಧ ದಾನಿಗಳು, ಸೇವಾ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಕಾರಣವಾಗಿದ್ದು, ಕೋವಿಡ್ 19 ಸಂದರ್ಭದಲ್ಲಿ ಸಂಸ್ಥೆಗೆ ಸಾಕಷ್ಟು ದಿನಸಿ ಆಹಾರಗಳ ಅಗತ್ಯತೆ ಇದೆ ಎಂದರು.

ಶಾಲಾ ಉಪಪ್ರಾಂಶುಪಾಲೆ ರೀಟಾ ಕ್ವಾಡ್ರಸ್ ಕಾರ್ಯಕ್ರಮ ಸಂಯೋಜಿಸಿ ದ್ದರು. ಶಾಲಾ ಆಡಳಿತ ಮಂಡಳಿಯ ಸದಸ್ಯ ವಾಲ್ಟರ್ ಡಿಸೋಜ ಮೊದಲಾದ ವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News