ಉದ್ಯಾವರ: ನೆರೆ ಸಂತ್ರಸ್ತರಿಗೆ ಪರಿಹಾರ ಕಿಟ್ ವಿತರಣೆ
ಉಡುಪಿ, ಅ.11: ಆಲ್ ಇಂಡಿಯಾ ಮುಸ್ಲಿಮ್ ಡೆವಲಪ್‌ಮೆಂಟ್ ಫೋರಂ ವತಿಯಿಂದ ನೆರೆ ಸಂತ್ರಸ್ತರಿಗೆ ಪರಿಹಾರ ಕಿಟ್ ಹಾಗೂ ಸಂತ್ರಸ್ತ ವಿದ್ಯಾರ್ಥಿಗಳಿಗೆ ನೋಟು ಪುಸ್ತಕ ವಿತರಣಾ ಕಾರ್ಯಕ್ರಮವು ಅ.8ರಂದು ಉದ್ಯಾವರದಲ್ಲಿ ಜರಗಿತು.
ಕಾರ್ಯಕ್ರಮವನ್ನು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಉದ್ಘಾಟಿಸಿ ದರು. ಫೋರಂನ ರಾಷ್ಟ್ರೀಯ ಸ್ಥಾಪಕ ಅಧ್ಯಕ್ಷ ಶಕೀಲ್ ಹಸನ್ ಮಾತನಾಡಿ ದರು. ಅಧ್ಯಕ್ಷತೆಯನ್ನು ಫೋರಂನ ಉಡುಪಿ ಜಿಲ್ಲಾಧ್ಯಕ್ಷ ುುಹಮ್ಮದ್ ಸಲ್ಮಾನ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಕಾಪು, ಫೋರಂನ ರಾಜ್ಯಾಧ್ಯಕ್ಷ ನಾಸೀರ್ ಅಹಮದ್ ಚಿಕ್ಕಮಗಳೂರು, ಕಾರ್ಯಾಧ್ಯಕ್ಷ ಅಮ್ಜದ್ ತುಮಕೂರ್, ರಾಜ್ಯ ಉಪಾಧ್ಯಕ್ಷ ಅಬೂಬಕ್ಕರ್ ಸಜೀಪ, ಕಾಸೀಂ ಪಟೇಲ್ ಜೇವರ್ಗಿ, ರಾಜ್ಯ ಕಾರ್ಯದರ್ಶಿ ಅಬ್ದುಲ್ ರಹೀಂ ಚಿಕ್ಕಮಗಳೂರು, ಐಟಿ ಸೆಲ್ ರಾಜ್ಯ ಮುಖ್ಯಸ್ಥ ದಾನಿಶ್, ಸಂಯೋಜಕ ಮೆಹಬೂಬ್ ದಕ್ನಿ, ಕಿದಾಮ ಫೌಂಡೇ ಶನ್ ಕೆಎಸ್‌ಎ ಸ್ಥಾಪಕ ನಿರ್ದೇಶಕ ಹನೀಫ್ ಶೇಕ್, ದ.ಕ. ಜಿಲ್ಲಾಧ್ಯಕ್ಷ ಆಸೀಫ್ ಚೊಕ್ಕಬೆಟ್ಟು, ರಾಜ್ಯ ಸಹಸಂಚಾಲಕ ಮುಹಮ್ಮದ್ ಆರೀಫ್ ಹೆಮ್ಮಾಡಿ, ಜಿಲ್ಲಾ ವಕ್ಫ್ ಸಲಹಾ ಮಂಡಳಿ ಅಧ್ಯಕ್ಷ ಕೆ.ಪಿ.ಇಬ್ರಾಹಿಂ ಮೊದಲಾದವರು ಉಪಸ್ಥಿತರಿದ್ದರು.
ಫೋರಂನ ಜಿಲ್ಲಾ ಉಪಾಧ್ಯಕ್ಷ ಆಬಿದ್ ಅಲಿ ಉದ್ಯಾವರ ಸ್ವಾಗತಿಸಿದರು. ನಕಾಶ್ ಕಂಡ್ಲೂರು ವಂದಿಸಿದರು.