ಚೆಕ್‌ಪೋಸ್ಟ್‌ಗಳಲ್ಲಿ ಸಿಬ್ಬಂದಿ ನೇಮಕಕ್ಕೆ ಪೊಲೀಸ್ ಆಯುಕ್ತರ ಸೂಚನೆ
Update: 2020-10-11 21:18 IST
ಮಂಗಳೂರು, ಅ.11: ನಗರ ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ ಅಕ್ರಮ ಗೋ ಸಾಗಾಟ ಮತ್ತಿತರ ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಗಟ್ಟಲು ತಕ್ಷಣ ಎಲ್ಲ ಚೆಕ್‌ಪೋಸ್ಟ್‌ಗಳಲ್ಲಿ ಕಡ್ಡಾಯ ಸಿಬ್ಬಂದಿ ನೇಮಕ ಮಾಡುವಂತೆ ಠಾಣಾಧಿಕಾರಿಗಳಿಗೆ ಪೊಲೀಸ್ ಆಯುಕ್ತ ವಿಕಾಶ್ ಕುಮಾರ್ ಸೂಚನೆ ನೀಡಿದ್ದಾರೆ.
ಸಿಬ್ಬಂದಿ ಕೊರತೆಯ ನೆಪ ಹೇಳಿ ಚೆಕ್‌ಪೋಸ್ಟ್‌ಗಳಿಗೆ ಸಿಬ್ಬಂದಿ ನೇಮಕ ಮಾಡದಿರುವಂತಿಲ್ಲ. ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುವ ನ್ಯಾಯಾಲಯ, ಸಮನ್ಸ್ ಜಾರಿ ಸಿಬ್ಬಂದಿ, ತನಿಖಾ ಸಹಾಯಕರು, ಠಾಣಾ ಬರಹಗಾರರು, ಅಪರಾಧ ಪತ್ತೆ ಸಿಬಂದಿಗಳನ್ನು ವಾರದಲ್ಲಿ ಒಂದು ದಿನ ಕರ್ತವ್ಯಕ್ಕೆ ನೇಮಿಸಬೇಕು. ಚೆಕ್‌ಪೋಸ್ಟ್‌ಗೆ ನೇಮಿಸಲಾದ ಸಿಬ್ಬಂದಿಗೆ ವಾಕಿಟಾಕಿ, ಟ್ರಾಫಿಕ್ ಲೈಟ್ ಬ್ಯಾಟನ್‌ಗಳನ್ನು ಕಡ್ಡಾಯವಾಗಿ ಒದಗಿಸಬೇಕು. ಚೆಕ್‌ಪೋಸ್ಟ್‌ಗಳಲ್ಲಿಡುವ ಬ್ಯಾರಿಕೇಡ್‌ಗಳಿಗೆ ರಿಪ್ಲೆಕ್ಟರ್ ಸ್ಟಿಕ್ಕರ್‌ಗಳನ್ನು ಅಂಟಿಸಬೇಕು ಎಂದು ಆಯುಕ್ತರು ಠಾಣಾಧಿಕಾರಿಗಳಿಗೆ ನೀಡಿದ ಸೂಚನೆಯಲ್ಲಿ ತಿಳಿಸಿದ್ದಾರೆ.