ಮೂಡುಬಿದಿರೆ: ಸಿಎಫ್‌ಐ ಕ್ರೀಡಾಕೂಟ
Update: 2020-10-11 21:21 IST
ಮಂಗಳೂರು, ಅ.11: ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಮೂಡುಬಿದಿರೆ ಯುನಿಟ್ ಇದರ ವತಿಯಿಂದ ಪರಿಸರದ ವಿದ್ಯಾರ್ಥಿಗಳಿಗೆ ವಲ್ಟಿ ಮೈದಾನದಲ್ಲಿ ಕ್ರೀಡಾಕೂಟ ಏರ್ಪಡಿಸಲಾಯಿತು.
ಸಿಎಫ್‌ಐ ಜಿಲ್ಲಾ ಕೋಶಾಧಿಕಾರಿ ಶರ್ಫುದ್ದೀನ್ ಧ್ವಜ ಹಸ್ತಾಂತರಿಸುವ ಮೂಲಕ ಕ್ರೀಡಾಕೂಟ ಉದ್ಘಾಟಿಸಿದರು. ಈ ಸಂದರ್ಭ ಪಿಎಫ್‌ಐ ಮೂಡುಬಿದಿರೆ ವಲಯ ಅಧ್ಯಕ್ಷ ನಾಸಿರ್, ಯುನಿಟ್ ಅಧ್ಯಕ್ಷ ನಬೀಲ್, ಕಾರ್ಯದರ್ಶಿ ನೌಫಲ್ ಉಪಸ್ಥಿತರಿದ್ದರು.