16ನೇ ಹೆರಿಗೆಯ ಬಳಿಕ ತಾಯಿ, ಮಗು ಮೃತ್ಯು

Update: 2020-10-11 15:59 GMT
ಸಾಂದರ್ಭಿಕ ಚಿತ್ರ

ದಾಮೋಹ್,ಅ.11: ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ತನ್ನ 16ನೇ ಮಗುವಿಗೆ ಜನ್ಮ ನೀಡಿದ್ದು, ಹೆರಿಗೆಯಾದ ಕೆಲವೇ ನಿಮಿಷಗಳಲ್ಲಿ ತಾಯಿ, ಮಗು ಇಬ್ಬರೂ ಮೃತಪಟ್ಟಿದ್ದಾರೆ.

   ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯ ಪಡಾಜ್‌ಹಿರ್ ಗ್ರಾಮದ ನಿವಾಸಿ ಸುಖ್ರಾನಿ ಅಹಿರ್‌ವಾರ್ ಶನಿವಾರ ತನ್ನ ಮನೆಯಲ್ಲಿ ಗಂಡುಮಗುವಿಗೆ ಜನ್ಮ ನೀಡಿದ್ದರು. ಆದರೆ ಹೆರಿಗೆಯಾದ ಕೂಡಲೇ ಮಹಿಳೆ ಹಾಗೂ ನವಜಾತ ಶಿಶುವಿನ ದೇಹಸ್ಥಿತಿ ಚಿಂತಾಜನಕವಾದ ಕಾರಣ, ಅವರನ್ನು ಕೂಡಲೇ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೊಂಡೊಯ್ಯಲಾಯಿತು. ಅಲ್ಲಿ ಅವರು ಮೃತಪಟ್ಟಿರುವುದಾಗಿ ಘೋಷಿಸಲಾಯಿತೆಂದು ಸ್ಥಳೀಯ ಆಶಾ ಕಾರ್ಯಕರ್ತೆ ಕಲ್ಲೊ ಬಾಯಿ ವಿಶ್ವಕರ್ಮ ತಿಳಿಸಿದ್ದಾರೆ.

ಅಹಿರ್‌ವಾರ್ ಅವರು ಈ ಮೊದಲು 15 ಮಕ್ಕಳಿಗೆ ಜನ್ಮ ನೀಡಿದ್ದರು. ಆ ಪೈಕಿ ಏಳು ಮಕ್ಕಳು ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News