ಮಹಿಳಾ ದೌರ್ಜನ್ಯ ವಿರೋಧಿಸಿ ಲೇಡಿ ಹಿಲ್ ನಲ್ಲಿ ಪ್ರತಿಭಟನೆ

Update: 2020-10-11 16:00 GMT

ಮಂಗಳೂರು, ಅ.11: ಉತ್ತರ ಪ್ರದೇಶದ ಹತ್ರಸ್ ನಲ್ಲಿ ನಡೆದ ಮಹಿಳೆಯ ಅತ್ಯಾಚಾರ, ಕೊಲೆ ಹಾಗೂ ದೇಶದ ವಿವಿಧ ಕಡೆ ಮಹಿಳೆಯರ ಮೇಲೆ ನಡೆಯುತ್ತಿರುವ ಹಿಂಸೆ ದೌರ್ಜನ್ಯಗಳ ವಿರುದ್ಧ ನಗರದ ಲೇಡಿ ಹಿಲ್ ವೃತ್ತದ ಬಳಿ ರವಿವಾರ ಸಮಾನ ಮನಸ್ಕರ ಸಂಘಟ ನೆಯ ವತಿಯಿಂದ ಮೊಂಬತ್ತಿ ಉರಿಸಿ  ಪ್ರತಿಭಟನಾ ಪ್ರದರ್ಶನ  ನಡೆಯಿತು.

ದೇಶದ ವಿವಿಧ ಕಡೆಗಳಲ್ಲಿ ಮಹಿಳೆಯರು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರು ವುದು ಅಪಾಯಕಾರಿ ಬೆಳವಣಿಗೆ ಯಾಗಿದೆ.ಈ ರೀತಿಯ ಮಹಿಳೆಯರ ಮೇಲಾಗುತ್ತಿರುವ ಹಿಂಸೆ, ದೌರ್ಜನ್ಯ ವನ್ನು ಖಂಡಿಸಿ ನ್ಯಾಯ ಒದಗಿಸಲು ಆಗ್ರಹಿಸಿ ಈ ಸಾಂಕೇತಿಕ  ಪ್ರತಿಭಟನಾ ಪ್ರದರ್ಶನದ ನಡೆಸುತ್ತಿರುವುದಾಗಿ ಪ್ರತಿಭಟನಾ ಸಭೆಯ ಸಂಘಟಕರಾದ ಸಾಮಾಜಿಕ ಕಾರ್ಯಕರ್ತೆ ವಿದ್ಯಾದಿನಕರ್ ತಿಳಿಸಿದ್ದಾರೆ.

ಹತ್ರಸ್ ನಲ್ಲಿ ನಡೆದ ಘಟನೆ ಹಾಗೂ ಆ ಘಟನೆಗೆ ಸಂಬಂಧಿಸಿ ದಂತೆ ಸರಕಾರ ನಡೆದುಕೊಂಡ ರೀತಿಯಿಂದ ನ್ಯಾಯ ದೊರೆಯಲು ಸಾಧ್ಯ ವಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಸೌಜನ್ಯ ಪ್ರಕರಣ ದಂತಹ ಪ್ರಕರಣ ಸೇರಿದಂತೆ ವಿವಿಧ ಕಡೆಗಳಲ್ಲಿ ಇಂತಹ ಪ್ರಕರಣಗಳು ನಡೆಯುತ್ತಲೇ ಇದೆ. ಇದು ಕೇವಲ ಮಹಿಳೆಯರ ಮೇಲಿನ ದೌರ್ಜನ್ಯವಲ್ಲ. ಮಾನವರೆಲ್ಲರೂ ಪ್ರತಿಭಟಿಸಬೇಕಾದ ಘಟನೆಯಾಗಿದೆ. ಈ ಹಿನ್ನೆಲೆಯಲ್ಲಿ ಈ ರೀತಿಯ ದೌರ್ಜನ್ಯ ಕೊನೆಯಾಗುವ ವರೆಗೆ ನಮ್ಮ ಪ್ರತಿಭಟನೆ ನಡೆಯುತ್ತಲೇ ಇರುತ್ತದೆ ಎಂದು ವಿಚಾರವಾದಿ ಸಂಘದ ರಾಷ್ಟ್ರೀಯ ಅಧ್ಯಕ್ಷ ಪ್ರೊ. ನರೇಂದ್ರ ನಾಯಕ್ ತಿಳಿಸಿದ್ದಾರೆ.

ಪ್ರತಿಭಟನಾ ಪ್ರದರ್ಶನ ದಲ್ಲಿ ವಿವಿಧ ಸಮಾನ ಮನಸ್ಕ ಸಂಘಟನೆಗಳ  ಪ್ರತಿನಿಧಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News