ಬೈಡನ್ ಅಧ್ಯಕ್ಷರಾದರೆ ಗ್ರೀನ್ ಕಾರ್ಡ್ ಮಿತಿ ಅಂತ್ಯ: ಭಾರತ ಮೂಲದ ಅಮೆರಿಕ ಸಂಸದರ ನಿರೀಕ್ಷೆ

Update: 2020-10-11 16:26 GMT

ವಾಶಿಂಗ್ಟನ್, ಅ. 11: ಅವೆುರಿಕದಲ್ಲಿ ವಿದೇಶೀಯರಿಗೆ ಶಾಶ್ವತವಾಗಿ ವಾಸಿಸಲು ಅವಕಾಶ ನೀಡುವ ಗ್ರೀನ್ ಕಾರ್ಡ್ ವಿತರಣೆಯ ಮೇಲೆ ವಿಧಿಸಲಾಗಿರುವ ದೇಶವಾರು ಮಿತಿಯನ್ನು ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬೈಡನ್ ಅಧಿಕಾರಕ್ಕೆ ಬಂದರೆ ರದ್ದುಪಡಿಸುತ್ತಾರೆ ಎಂಬ ವಿಶ್ವಾಸವನ್ನು ಭಾರತ ಮೂಲದ ಸಂಸದರು ವ್ಯಕ್ತಪಡಿಸಿದ್ದಾರೆ.

ಎಚ್-1ಬಿ ವೀಸಾಗಳಲ್ಲಿ ಅಮೆರಿಕದಲ್ಲಿ ಕೆಲಸ ಮಾಡುತ್ತಿರುವ ಭಾರತೀಯರು ಈಗ ಗ್ರೀನ್ ಕಾರ್ಡ್ ಪಡೆಯುವುದಕ್ಕಾಗಿ ದಶಕಗಳ ಕಾಲ ಕಾಯಬೇಕಾದ ಪರಿಸ್ಥಿತಿಯಿದೆ ಎಂದು ಅವರು ವಿಷಾದಿಸಿದ್ದಾರೆ.

ಅಮೆರಿಕದಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ಮಾಹಿತಿ ತಂತ್ರಜ್ಞಾನ ಉದ್ಯೋಗಿಗಳು ಹಾಲಿ ವಲಸೆ ವ್ಯವಸ್ಥೆಯ ಕೆಟ್ಟ ಬಲಿಪಶುಗಳಾಗಿದ್ದಾರೆ ಎಂದು ಶನಿವಾರ ನಡೆದ ಆನ್‌ಲೈನ್ ಸಂವಾದವೊಂದರಲ್ಲಿ ಸಂಸದರಾದ ರಾಜಾ ಕೃಷ್ಣಮೂರ್ತಿ, ಆಮಿ ಬೇರಾ, ಪ್ರಮೀಳಾ ಜಯಪಾಲ್ ಮತ್ತು ರೋ ಖನ್ನಾ ಅಭಿಪ್ರಾಯಪಟ್ಟಿದ್ದಾರೆ.

ಗ್ರೀನ್ ಕಾರ್ಡ್ ವಿತರಣೆಯಲ್ಲಿ ಪ್ರತಿ ವರ್ಷ 7 ಶೇಕಡ ದೇಶಾವಾರು ಮಿತಿಯನ್ನು ವಿಧಿಸಲಾಗಿದೆ.

‘‘ಜೋ ಬೈಡನ್ ಸರಕಾರದಡಿಯಲ್ಲಿ, ಸಮಗ್ರ ವಲಸೆ ಸುಧಾರಣೆಯ ಭಾಗವಾಗಿ ಕೊನೆಗೂ ನಮಗೆ ಈ ಮಸೂದೆಯನ್ನು ಸೆನೆಟ್‌ನಲ್ಲಿ ಮಂಡಿಸಲು ಸಾಧ್ಯವಾಗಬಹುದು ಹಾಗೂ ಬಳಿಕ ಅದು ಕಾನೂನಾಗಿ ಅಂಗೀಕಾರಗೊಳ್ಳಬಹುದು ಎಂಬ ವಿಶ್ವಾಸ ನನಗಿದೆ’’ ಎಂದು ರಾಜಾ ಕೃಷ್ಣಮೂರ್ತಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News