ಚಿಲಿಯಲ್ಲಿ ಕೊರೋನ ವೈರಸ್ ರೂಪಾಂತರ?: ವಿಜ್ಞಾನಿಗಳಿಂದ ಸಂಶೋಧನೆ

Update: 2020-10-11 17:07 GMT

ಸಾಂಟಿಯಾಗೊ (ಚಿಲಿ), ಅ. 11: ದಕ್ಷಿಣ ಅಮೆರಿಕದ ತುತ್ತ ತುದಿಯ ಸಮೀಪದ ದುರ್ಗಮ ವಲಯ ಪಟಗೊನಿಯದಲ್ಲಿ ಕೊರೋನ ವೈರಸ್‌ನ ಸಂಭಾವ್ಯ ರೂಪಾಂತರ (ಮ್ಯುಟೇಶನ್)ದ ಬಗ್ಗೆ ಚಿಲಿ ದೇಶದ ವಿಜ್ಞಾನಿಗಳು ಸಂಶೋಧನೆ ನಡೆಸುತ್ತಿದ್ದಾರೆ. ಇಲ್ಲಿ ಇತ್ತೀಚಿನ ವಾರಗಳಲ್ಲಿ ಅಸಾಮಾನ್ಯವೆಂಬಂತೆ ಭಾರೀ ಪ್ರಮಾಣದಲ್ಲಿ ಅತ್ಯಂತ ಸಾಂಕ್ರಾಮಿಕ ಕೊರೋನ ವೈರಸ್‌ನ ಎರಡನೇ ಅಲೆ ಆರಂಭವಾಗಿದೆ.

ದುರ್ಗಮ ಮ್ಯಾಗಲನ್ಸ್ ವಲಯದಲ್ಲಿ ದೇಶದ ಜನಸಂಖ್ಯೆಯ ಒಂದು ಶೇಕಡದಷ್ಟು ಜನರಿದ್ದಾರೆ. ಆದರೆ, ಚಿಲಿಯಲ್ಲಿ ಈವರೆಗೆ ವರದಿಯಾಗಿರುವ ಕೊರೋನ ವೈರಸ್ ಸೋಂಕು ಪ್ರಕರಣಗಳ ಪೈಕಿ 20 ಶೇಕಡದಷ್ಟು ಈ ವಲಯದಲ್ಲೇ ವರದಿಯಾಗಿದೆ. ಇದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ.

ಹಾಗಾಗಿ, ಈ ವಲಯದಲ್ಲಿ ಕೊರೋನ ವೈರಸ್ ರೂಪಾಂತರಗೊಂಡಿರಬಹುದು ಎಂಬುದಾಗಿ ಭಾವಿಸಲಾಗಿದೆ.

ಈಗಾಗಲೇ ಜಗತ್ತಿನ ಹಲವು ಭಾಗಗಳಲ್ಲಿ ವೈರಸ್‌ನ ರೂಪಾಂತರ ವರದಿಯಾಗಿದ್ದರೂ, ಮಾನವರ ಮೇಲೆ ಅವುಗಳ ಪರಿಣಾಮ ಏನೇನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News