×
Ad

ಉಡುಪಿ ಜಿಲ್ಲೆಯ ಕೋವಿಡ್ ನಿಯಂತ್ರಣಕ್ಕೆ ಲಯನ್ಸ್ ಕ್ಲಬ್‌ನಿಂದ 47 ಲಕ್ಷ ರೂ. ಸಾಮಗ್ರಿ ಹಸ್ತಾಂತರ

Update: 2020-10-12 18:13 IST

ಉಡುಪಿ, ಅ.12: ಲಯನ್ಸ್ 317ಸಿ ಪರವಾಗಿ ಮಂಗಳವಾರ ಕೋವಿಡ್- 19 ಮುಂಜಾಗ್ರತೆ ಹಾಗೂ ನಿಯಂತ್ರಣಕ್ಕಾಗಿ ಒಟ್ಟು 47 ಲಕ್ಷ ರೂ. ಮೊತ್ತದ ಸಾಮಗ್ರಿಗಳನ್ನು ಜಿಲ್ಲಾಸ್ಪತ್ರೆಗೆ ಹಸ್ತಾಂತರಿಸಲಾಗುವುದು ಎಂದು ಲಯನ್ಸ್ ಕ್ಲಬ್‌ನ ಪ್ರಕಟಣೆ ತಿಳಿಸಿದೆ.

ಅ.13ರ ಸಂಜೆ 4 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಈ ಸಾಮಗ್ರಿಗಳನ್ನು ಅಧಿಕೃತವಾಗಿ ಹಸ್ತಾಂತರಿಸಲಾಗುವುದು ಎಂದು ಜಿಲ್ಲಾ ಗವರ್ನರ್ ನೀಲಕಂಠ ಎಂ.ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಂಬೈನ ಟಾಟಾ ಎಜ್ಯುಕೇಷನ್ ಆ್ಯಂಡ್ ಡೆವಲಪ್‌ಮೆಂಟ್ ಟ್ರಸ್ಟ್ 1560 ಪಿಪಿಇ ಸಾದಾ ಬಟ್ಟೆ, 480 ಪಿಪಿಇ ವಿಶೇಷ ಬಟ್ಟೆ, 6000 ಎನ್95 ಮಾಸ್ತ್, 6000 ಸರ್ಜಿಕಲ್ ಮಾಸ್ಕ್‌ಗಳನ್ನು ನೀಡಿದ್ದು, ಅವುಗಳನ್ನು ಜಿಲ್ಲಾಧಿಕಾರಿ ಗಳ ಸಮ್ಮುಖದಲ್ಲಿ ಜಿಲ್ಲಾಸ್ಪತ್ರೆಗೆ ಹಸ್ತಾಂತರಿಸಲಾಗುತ್ತದೆ. ಈ ಸಂದರ್ಭದಲ್ಲಿ ಜನಪ್ರತಿನಿಧಿಗಳು, ಲಯನ್ಸ್‌ನ ಹಿರಿಯ ಪದಾಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿರುವರು ಎಂದು ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News