×
Ad

ದ.ಕ. ಜಿಲ್ಲೆ: 303 ಮಂದಿಗೆ ಕೊರೋನ ಸೋಂಕು, ನಾಲ್ವರು ಮೃತ್ಯು

Update: 2020-10-12 19:39 IST

ಮಂಗಳೂರು, ಅ.12: ದ.ಕ. ಜಿಲ್ಲೆಯಲ್ಲಿ ಸೋಮವಾರ 303 ಮಂದಿಗೆ ಕೊರೋನ ಸೋಂಕು ತಗುಲಿದ್ದು, 4 ಮಂದಿ ಮೃತಪಟ್ಟಿದ್ದಾರೆ. 194 ಮಂದಿ ಗುಣಮುಖರಾಗಿದ್ದಾರೆ.

ಈವರೆಗಿನ ಅಂಕಿ ಅಂಶಗಳ ಪ್ರಕಾರ ಜಿಲ್ಲೆಯಲ್ಲಿ 1,99,759 ಮಂದಿಯ ಪರೀಕ್ಷೆ ಮಾಡಿಸಲಾಗಿದೆ. ಆ ಪೈಕಿ 1,72,927 ಮಂದಿಯ ವರದಿ ನೆಗೆಟಿವ್ ಮತ್ತು 26,832 ಮಂದಿಯ ವರದಿ ಪಾಸಿಟಿವ್ ಬಂದಿದೆ. ಅಲ್ಲದೆ ಒಟ್ಟು 609 ಮಂದಿ ಸಾವಿಗೀಡಾಗಿದ್ದಾರೆ. 21,938 ಮಂದಿ ಕೊರೋನ ಸೋಂಕಿನಿಂದ ಗುಣಮುಖರಾಗಿದ್ದಾರೆ. ಸದ್ಯ 4,285 ಸಕ್ರಿಯ ಪ್ರಕರಣಗಳಿವೆ.

6,883 ಮಾಸ್ಕ್ ಉಲ್ಲಂಘನೆ ಪ್ರಕರಣ: ರಾಜ್ಯ ಮತ್ತು ಕೇಂದ್ರ ಸರಕಾರಗಳ ಕೋವಿಡ್ ಮಾರ್ಗಸೂಚಿಯ ಹೊರತಾಗಿಯೂ ಮಾಸ್ಕ್ ಧರಿಸದೆ ಸಾರ್ವಜನಿಕ ಸ್ಥಳದಲ್ಲಿ ಸಂಚರಿಸಿದ ವ್ಯಕ್ತಿಗಳ ವಿರುದ್ಧ ಈವರೆಗೆ 6,883 ಪ್ರಕರಣ ದಾಖಲಿಸಲಾಗಿದ್ದು, 8,34,085 ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News