×
Ad

ಕೈಗಾರಿಕಾ ಘಟಕಗಳಿಗೆ ಉದ್ಯಮ ನೋಂದಣಿ ಕಡ್ಡಾಯ

Update: 2020-10-12 20:08 IST

ಉಡುಪಿ, ಅ.12: ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಲ್ಲಿ ಕೈಗಾರಿಕಾ ಘಟಕಗಳ ನೋಂದಣಿ ಬಗ್ಗೆ ‘ಉದ್ಯಮ ನೋಂದಣಿ’ ಚಾಲ್ತಿಯಲ್ಲಿದ್ದು, ಆನ್‌ಲೈನ್‌ನಲ್ಲಿ -https://udyamregistration.gov.in - ಬಳಸಿ ಉದ್ಯಮ ನೋಂದಣಿ ಪ್ರವಾಣ ಪತ್ರವನ್ನು ಪಡೆಯಬಹುದಾಗಿದೆ.

ನೋಂದಣಿಗೆ ಯಾವುದೇ ಶುಲ್ಕ ಇರುವುದಿಲ್ಲ. ಜಿಲ್ಲೆಯ ಎಲ್ಲಾ ಕೈಗಾರಿಕಾ ಘಟಕಗಳು ಉದ್ಯಮ ನೋಂದಣಿ ಮಾಡಬೇಕು. ಈ ಹಿಂದೆ ಪಡೆದ ಉದ್ಯೋಗ್ ಆಧಾರ್, ಎಸ್‌ಎಸ್‌ಐ ರಿಜಿಸ್ಟ್ರೇಶನ್ ಸರ್ಟಿಫಿಕೇಟ್ ಅಥವಾ ಇಎಂ-11 ನೋಂದಣಿಗೆ ಮುಂದೆ ಮಾನ್ಯತೆ ಇರುವುದಿಲ್ಲ. ಆದುದರಿಂದ ಎಲ್ಲಾ ಕೈಗಾರಿಕೋದ್ಯಮಿಗಳು ಹೊಸದಾಗಿ ‘ಉದ್ಯಮ ರಿಜಿಸ್ಟ್ರೇಶನ್’ ಮಾಡಿ ಕೊಳ್ಳುವಂತೆ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇ ಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News