ದ.ಕ. ಜಿಲ್ಲಾ ಎಸ್‌ವೈಎಸ್ ಕಾರ್ಯಕರ್ತರ ಸಭೆ

Update: 2020-10-12 14:52 GMT

ಸುಳ್ಯ, ಅ.12: ದ.ಕ. ಜಿಲ್ಲಾ ಎಸ್‌ವೈಎಸ್ (ಸುನ್ನಿ ಯುವ ಜನ ಸಂಘ)ನ ಕಾರ್ಯಕರ್ತರ ಸಮಾವೇಶವು ಸುಳ್ಯ ಗಾಂಧಿನಗರ ಸುನ್ನಿ ಮಹಲ್ ಕಚೇರಿಯಲ್ಲಿ ರವಿವಾರ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ದಾರಿಮೀಸ್ ಒಕ್ಕೂಟದ ರಾಜ್ಯಾಧ್ಯಕ್ಷ ಎಸ್‌ಬಿ ಮುಹಮ್ಮದ್ ದಾರಿಮಿ ಸಮಸ್ಯೆ, ಸವಾಲುಗಳನ್ನು ಎದುರಿಸಲು ಒಗ್ಗಟ್ಟಾಗಬೇಕಿದೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಮೌಲಾನ ಯುಕೆ ದಾರಿಮಿ ಜನರ ಜಗತ್ತಿನಾದ್ಯಂತ ಹಿಂಸಾಪ್ರವೃತ್ತಿ ಹೆಚ್ಚುತ್ತಿವೆ. ಈ ಮಧ್ಯೆ ವಿವಿಧ ರೀತಿಯ ರೋಗ ರುಜಿನಗಳು ಮತ್ತು ದುರಂತಗಳ ಸರಮಾಲೆಗಳೇ ಸಂಭವಿಸುತ್ತಿದೆ. ಈ ಬಗ್ಗೆ ಯೋಚಿಸಬೇಕಿದೆ ಎಂದರು.

ಜಿಲ್ಲಾ ನಾಯಕರಾದ ತಬೂಕು ದಾರಿಮಿ, ರಫೀಕ್ ಹಾಜಿ ಕೊಡಾಜೆ, ತಾಜ್ ಮುಹಮ್ಮದ್ ಸಂಪಾಜೆ ,ಕರಾವಳಿ ಹಮೀದ್ ಉಪ್ಪಿನಂಗಡಿ ಮಾತಾಡಿದರು.

ಹಕೀಂ ಪರ್ತಿಪ್ಪಾಡಿ, ಎಸ್‌ಕೆ ಹಮೀದ್ ಹಾಜಿ, ಅಕ್ಬರ್ ಮುಸ್ಲಿಯಾರ್ ಅರಂಬೂರು, ರಫೀಕ್ ಮುಸ್ಲಿಯಾರ್ ಅಜ್ಜಾವರ, ಅಹ್ಮದ್ ಮದನಿ, ಹಸೈನಾರ್ ದರ್ಮತನ್ನಿ, ಝೈನುದ್ದೀನ್ ಮುಸ್ಲಿಯಾರ್ ಅಜ್ಜಾವರ, ಅಹ್ಮದ್ ಹಾಜಿ ಪಾರ,ಟಿಎಚ್ ಮುಹಮ್ಮದ್ ಕುಂಞಿ, ಸುಪ್ರಿಂ ಅಹ್ಮದ್ ಹಾಜಿ, ಅಶ್ರಫ್ ಅರಂತೋಡು, ಕೆಎಚ್ ಅಬ್ದುಲ್ ರಝಾಕ್, ಮೂಸಾ ಅರಂತೋಡು, ಅಬ್ದುಲ್ಲ ಕನಕಮಜಲ್,ಕೆ ಸಿ ಹಸೈನಾರ್ ಕನಕಮಜಲ್,ಎಎಂ ಅಬೂಬಕರ್ ಹಾಜಿ ಅಜ್ಜಾವರ ಮತ್ತಿತರರು ಉಪಸ್ಥಿತರಿದ್ದರು.

ಎಸ್‌ವೈಎಸ್ ಜಿಲ್ಲಾ ಸಮಿತಿಯ ವತಿಯಿಂದ ಸಂಗ್ರಹಿಸಿದ್ದ ಯತೀಂ ಹುಡುಗಿಯ ಮದುವೆ ಸಹಾಯ ಧನವನ್ನು ಸುಳ್ಯ ಎಸ್‌ವೈಎಸ್ ಅದ್ಯಕ್ಷ ಕತರ್ ಹಾಜಿಗೆ ಹಸ್ತಾಂತರಿಸಲಾಯಿತು. ಜಿಲ್ಲಾ ಕಾರ್ಯದರ್ಶಿ ಕೆಎಲ್ ಉಮರ್ ದಾರಿಮಿ ಶಾಖೆಗಳನ್ನು ರಚಿಸುವ ಬಗ್ಗೆ ಮಾಹಿತಿ ನೀಡಿದರು.

ಶಾಫಿ ದಾರಿಮಿ ಅಜ್ಜಾವರ ಸ್ವಾಗತಿಸಿದರು. ರಝಾಕ್ ಮುಸ್ಲಿಯಾರ್ ಅಜ್ಜಾವರ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News