ಕನ್ನಡದ ಉತ್ತಮ ಪುಸ್ತಕ ಬಹುಮಾನಕ್ಕೆ ಅರ್ಜಿ ಆಹ್ವಾನ
Update: 2020-10-12 20:25 IST
ಮಂಗಳೂರು, ಅ.12: ಕರ್ನಾಟಕ ಸಂಗೀತ ನೃತ್ಯ ಅಕಾಡಮಿಯು ಸಂಗೀತ ನೃತ್ಯಕ್ಕೆ ಸಂಬಂಧಿಸಿದಂತೆ ಪ್ರಕಟವಾಗಿರುವ ಕನ್ನಡದ ಉತ್ತಮ ಪುಸ್ತಕಕ್ಕೆ ಬಹುಮಾನ ನೀಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.
ಕರ್ನಾಟಕ ಸಂಗೀತ ಹಿಂದುಸ್ತಾನಿ ಸಂಗೀತ, ಸುಗಮ ಸಂಗೀತ, ನೃತ್ಯಕ, ಕಥಾ ಕೀರ್ತನ, ಗಮಕ ಕಲಾಪ್ರಕಾರಗಳಲ್ಲಿ 2019ರ ಜನವರಿಯಿಂದ 2019ರ ಡಿಸೆಂಬರ್‌ನೊಳಗೆ ಪ್ರಕಟಿಸಿರುವ ಪುಸ್ತಕಗಳನ್ನು ನವೆಂಬರ್ 15ರೊಳಗೆ ಸಹಾಯಕ ನಿರ್ದೇಶಕರ ಕಚೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ತುಳುಭವನ, ಉರ್ವಸ್ಟೋರ್ ಅಶೋಕ ನಗರ - 575006 ಇಲ್ಲಿಗೆ ಸಲ್ಲಿಸಬಹುದು.
ಮಾಹಿತಿಗಾಗಿ ದೂ.ಸಂ. 0824-2951327 ಅಥವಾ ನ್ನು ವೀಕ್ಷಿಸಬಹುದು ಎಂದು ಪ್ರಕಟನೆ ತಿಳಿಸಿದೆ.