ಅ.13: ವಿವಿಧೆಡೆ ವಿದ್ಯುತ್ ಕಡಿತ
ಮಂಗಳೂರು, ಅ.12: ಕುದ್ರೋಳಿ ಉಪಕೇಂದ್ರದಿಂದ ಹೊರಡುವ ಫೀಡರ್‌ನಲ್ಲಿ ಜಂಪರ್ ಬದಲಾವಣೆ ಹಾಗೂ ದುರಸ್ತಿ ಕಾಮಗಾರಿಯು ನಡೆಯಲಿರುವುದರಿಂದ ಅ.13ರಂದು ಬೆಳಗ್ಗೆ 9ರಿಂದ ಸಂಜೆ 5ರವರೆಗೆ ನಗರದ ಪ್ರಗತಿ ಸರ್ವಿಸ್ ಸ್ಟೇಷನ್, ಡೊಂಗರಕೇರಿ, ಸಿಟಿ ಪಾಯಿಂಟ್, ಪಿವಿಎಸ್ ಕಲಾಕುಂಜ, ಬೆಸೆಂಟ್ ಕಾಲೇಜು, ಭಗವತಿನಗರ, ಅಳಕೆ, ಗೋಕರ್ಣನಾಥ, ಕುದ್ರೋಳಿ, ನಡುಪಳ್ಳಿ, ಜಾಮಿಯಾ ಮಸೀದಿ, ಸುಂದರ ಐಸ್‌ಪ್ಲಾಂಟ್, ಬಸವನಗುಡಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳ್ಳಲಿದೆ.
ಅ.13ರಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಪಣಂಬೂರು ವಿವೇಕಾನಂದ ನಗರ, ಜೋಕಟ್ಟೆ, ಆಲಗುಡ್ಡೆ, ನಾಗಬ್ರಹ್ಮ ಸನ್ನಿಧಿ, ಕೋಡಿಕಲ್ ಕಟ್ಟೆ, ಕೋಡಿಕಲ್ ಸ್ಕೂಲ್, ಬಳ್ಳಿ ಕಂಪೌಂಡು, ಡೊಮಿನಿಕ್ ಚರ್ಚ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.
ಅ.13ರಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಸಾಗರ್ ಕೋರ್ಟ್, ಅಬ್ಬಕ್ಕನಗರ, ಕಲ್ಬಾವಿ, ಎಂಆರ್ ಇಂಜಿನಿಯರಿಂಗ್, ಪೃಥ್ವಿ ಲಾಡ್ಜ್ ಬಳಿ ವಿದ್ಯುತ್ ನಿಲುಗಡೆಗೊಳ್ಳಲಿದೆ.