ಕೊರೋನ ವೈರಸ್ ನಿಂದ ನಾಗಾಲ್ಯಾಂಡ್ ಸಚಿವ ನಿಧನ

Update: 2020-10-12 16:13 GMT

ಕೊಹಿಮಾ: ನಾಗಾಲ್ಯಾಂಡ್ ನ ಹಿರಿಯ ಸಚಿವ ಸಿಎಂ ಚಾಂಗ್ ಕೋಹಿಮಾದಲ್ಲಿ ಸೋಮವಾರ ಕೋವಿಡ್-19 ಕಾಯಿಲೆಯಿಂದಾಗಿ ನಿಧನರಾಗಿದ್ದಾರೆ. ಅವರಿಗೆ 77 ವರ್ಷ ವಯಸ್ಸಾಗಿತ್ತು ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಚಾಂಗ್ ಅವರು ಪತ್ನಿ, ನಾಲ್ವರು ಪುತ್ರರು, ಐವರು ಪುತ್ರಿಯರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

ಸಿಎಂ ಚಾಂಗ್ ಕೋವಿಡ್-19ಗಾಗಿ ಕೊಹಿಮಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಾಂಗ್ ಕೋವಿಡ್ ಗೆ ಬಲಿಯಾಗಿರುವ ರಾಜ್ಯದ ಮೊದಲ ಶಾಸಕರಾಗಿದ್ದಾರೆ. ಚಾಂಗ್ ಅವರು ಪರಿಸರ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಚಾಂಗ್ ಅವರು ಆಡಳಿತಾರೂಢ ಎನ್ ಡಿಪಿಪಿಯ ನೊಸೆನ್ ಕ್ಷೇತ್ರದಿಂದ ಚುನಾಯಿತರಾಗಿದ್ದರು. 2009ರಲ್ಲಿ ಲೋಕಸಭೆಗೆ ಆಯ್ಕೆಯಾಗಿದ್ದ ಚಾಂಗ್ ಐಎಎಸ್ ಅಧಿಕಾರಿಯಾಗಿ ರಾಜ್ಯದಲ್ಲಿ ಹಲವು ಹುದ್ದೆಗಳನ್ನು ನಿಭಾಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News