ಪ್ರತ್ಯೇಕ ಪ್ರಕರಣ: ಇಬ್ಬರ ಆತ್ಮಹತ್ಯೆ

Update: 2020-10-12 16:21 GMT

ಕಾರ್ಕಳ, ಅ.12: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಕಾರ್ಕಳ ನಾಗರ ಬಾವಿ ರಸ್ತೆಯ ನಿವಾಸಿ ಅನಂತಪದ್ಮನಾಭ ಜೋಯಿಷ್ ಎಂಬವರ ಪತ್ನಿ ಲಲಿತಾ(56) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಅ.11ರಂದು ಮಧ್ಯಾಹ್ನ ವೇಳೆ ಮನೆಯ ಮಲಗುವ ಕೋಣೆಯಲ್ಲಿ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

ಬೈಂದೂರು: ವಿಪರೀತ ಮದ್ಯಪಾನ ಮಾಡುವ ಚಟ ಹೊಂದಿದ್ದ ವೀರೇಶ ಬಸವಂತಪ್ಪ ನಿಡಗುಂಡಿ(27) ಎಂಬವರು ಮಾನಸಿಕ ಖಿನ್ನತೆಯಿಂದ ಅ.10 ರಂದು ರಾತ್ರಿ ಯಳಜಿತ್ ಗ್ರಾಮದಲ್ಲಿರುವ ಬಾಡಿಗೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News