ಕುಸಿದು ಬಿದ್ದು ಯುವಕ ಸಾವು
Update: 2020-10-12 22:03 IST
ಉಡುಪಿ, ಅ.12: ಬಾರ್‌ನಲ್ಲಿ ಊಟ ಮುಗಿಸಿ ಹೊರಗೆ ಬರುತ್ತಿದ್ದ ಯುವಕನೋರ್ವ ಕುಸಿದು ಬಿದ್ದು ಮೃತಪಟ್ಟ ಘಟನೆ ಅ.11ರಂದು ಮಧ್ಯಾಹ್ನ ವೇಳೆ ನಡೆದಿದೆ.
ಮೃತರನ್ನು ಉದ್ಯಾವರ ಸಂಪಿಗೆ ನಗರ ನಿವಾಸಿ ಶೇಖರ ಎಂಬವರ ಮಗ ಸಚಿನ್ (23) ಎಂದು ಗುರುತಿಸಲಾಗಿದೆ. ಇವರು ಗೆಳೆಯರೊಂದಿಗೆ ಆದಿ ಉಡುಪಿ ಪಂದುಬೆಟ್ಟಿನಲ್ಲಿರುವ ಬಾರ್‌ನಲ್ಲಿ ಊಟ ಮುಗಿಸಿ, ಹೊರಗೆ ಬರು ವಾಗ ಒಮ್ಮೆಲೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.