×
Ad

​ಉಳಾಯಿಬೆಟ್ಟು ಗ್ರಾಪಂ‌ ಮಾಜಿ‌ ಅಧ್ಯಕ್ಷರ ಕೊಲೆಯತ್ನ

Update: 2020-10-12 23:08 IST

ಮಂಗಳೂರು, ಅ.12: ಉಳಾಯಿಬೆಟ್ಟು ಗ್ರಾಪಂ ಮಾಜಿ ಅಧ್ಯಕ್ಷ ಹಾಗೂ ಮಂಗಳೂರು ತಾಪಂ ಮಾಜಿ ಸದಸ್ಯ ಯೂಸುಫ್ ಅವರ ಮೇಲೆ ದುಷ್ಕರ್ಮಿಗಳ ತಂಡವೊಂದು ತಲವಾರು ದಾಳಿ ನಡೆಸಿದ ಘಟನೆ ಸೋಮವಾರ ಸಂಜೆ ನಡೆದಿದೆ.

ಗಾಯಗೊಂಡ ಯೂಸುಫ್ ಅವರನ್ನು ನಗರದ ಖಾಸಗಿ  ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಂಗಳೂರಿನಿಂದ ಉಳಾಯಿಬೆಟ್ಡುವಿಗೆ ಯೂಸುಫ್ ಅವರು ತನ್ನ ಕಾರಿನಲ್ಲಿ ತೆರಳುತ್ತಿದ್ದಾಗ ಕುಲಶೇಖರ ಬಳಿ ಬೈಕೊಂದು ಯೂಸುಫ್‌ರ ಕಾರಿಗೆ ಹಿಂದಿನಿಂದ ಢಿಕ್ಕಿ ಹೊಡೆಯಿತು ಎನ್ನಲಾಗಿದೆ. ತಕ್ಷಣ ಯೂಸುಫ್‌ ತನ್ನ ಕಾರನ್ನು ನಿಲ್ಲಿಸಿ ಪ್ರಶ್ನಿಸಿದಾಗ ಬೈಕ್ ಸವಾರ ಕ್ಷಮೆ ಕೇಳಿದ್ದು, ಅಷ್ಟರಲ್ಲಿ ಮುಂದಿನಿಂದ ಬಂದು ಅಡ್ಡ ನಿಂತ ಬಿಳಿ ಬಣ್ಣದ ಕಾರಿನಿಂದಿಳಿದ ನಾಲ್ಕೈದು ಮಂದಿ ಯೂಸುಫ್‌ಗೆ ತಲವಾರು ದಾಳಿ ನಡೆಸಿ ಕಾರಿನ ಗಾಜು ಹೊಡೆದು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಕಂಕನಾಡಿ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News