ಅ.15ರಿಂದ ಡಾ.ಟಿಎಂಎ ಪೈ ಆಸ್ಪತ್ರೆಯಲ್ಲಿ ಓಪಿಡಿ ಸೇವೆ ಪ್ರಾರಂಭ

Update: 2020-10-13 13:29 GMT

ಉಡುಪಿ, ಅ.13: ಇದೇ ಅ.15ರ ಗುರುವಾರದಿಂದ ನಗರದ ಡಾ.ಟಿಎಂಎ ಪೈ ಆಸ್ಪತ್ರೆಯಎಲ್ಲ ಹೊರರೋಗಿ ವಿಭಾಗಗಳು ಈ ಹಿಂದಿನಂತೆ ಸಾರ್ವಜನಿಕರ ಸೇವೆಗೆ ಲಭ್ಯವಿರುತ್ತದೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ಶಶಿಕಿರಣ್ ಉಮಾಕಾಂತ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗುರುವಾರದಿಂದ ಜಾರಿಗೆ ಬರುವಂತೆ ಪ್ರತಿದಿನ ಬೆಳಗ್ಗೆ 9:00ರಿಂದ ಮಧ್ಯಾಹ್ನ 1:00ರವರೆಗೆ ಆಸ್ಪತ್ರೆಯ ಎಲ್ಲಾ ಹೊರರೋಗಿ ವಿಭಾಗ ಸಾರ್ವಜನಿಕರಿಗೆ ಲಭ್ಯವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಡಾ.ಟಿಎಂಎ ಪೈ ಆಸ್ಪತ್ರೆಯು ಕಳೆದ ಎ.1ರಿಂದ ಕೋವಿಡ್-19 ಆಸ್ಪತ್ರೆಯಾಗಿ ಕಾರ್ಯನಿರ್ವಹಿಸುತ್ತಿದೆ. ಕೋವಿಡ್ ಆಸ್ಪತ್ರೆ ಈಗಲೂ ಮುಂದುವರಿದಿದ್ದರೂ, ಹೊರರೋಗಿಗಳ ವಿಭಾಗದ ಕಟ್ಟಡ ಒಳರೋಗಿ ವಿಭಾಗದಿಂದ ಪ್ರತ್ಯೇಕವಾಗಿದೆ. ಕೋವಿಡ್-19 ಕ್ಕೆ ಸಂಬಂಧಿಸಿದ ಎಲ್ಲಾ ಮುನ್ನೆಚ್ಚರಿಕೆಗಳನ್ನು - ಮಾಸ್ಕ್, ಸುರಕ್ಷಿತ ಅಂತರ, ನೈರ್ಮಲ್ಯೀಕರಣ ಮತ್ತು ಒಪಿಡಿ ಪ್ರದೇಶಗಳಲ್ಲಿ ಜನಸಂದಣಿಯನ್ನು ತಪ್ಪಿಸುವುದು ಸೇರಿದಂತೆ- ಇಲ್ಲಿ ತೆಗೆದುಕೊಳ್ಳಲಾಗುತ್ತದೆ ಎಂದು ಡಾ.ಶಶಿಕಿರಣ್ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಅಗತ್ಯವಿರುವವರು ದೂರವಾಣಿ ಸಂಖ್ಯೆ:7259032864ಕ್ಕೆ ಕರೆ ಮಾಡಿ ಪೂರ್ವ ನಿಗದಿಯೊಂದಿಗೆ ಈ ಸೌಲಭ್ಯವನ್ನು ಪಡೆಯಬಹುದು. ವಯಸ್ಸಾದ ವರು, ಮಕ್ಕಳು ಮತ್ತು ಅವಲಂಬಿತ ರೋಗಿಗಳ ಸಂದರ್ಭದಲ್ಲಿ ಮಾತ್ರ ಇನ್ನೊಬ್ಬ ವ್ಯಕ್ತಿಯನ್ನು ಒಪಿಡಿ ಪ್ರದೇಶಕ್ಕೆ ರೋಗಿಯೊಂದಿಗೆ ಪ್ರವೇಶಿಸಲು ಅನುಮತಿ ನೀಡಲಾಗುತ್ತದೆ. ಆಸ್ಪತ್ರೆಗೆ ಪ್ರವೇಶಿಸುವ ಪ್ರತಿಯೊಬ್ಬರಿಗೂ ಮಾಸ್ಕ್ ಕಡ್ಡಾಯ ವಾಗಿರುತ್ತದೆ ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News