×
Ad

ಆನೆ ಮೇಲೆ ಕುಳಿತು ಯೋಗ ಮಾಡಲು ಹೋಗಿ ಬಿದ್ದ ರಾಮ್ ದೇವ್!

Update: 2020-10-13 19:48 IST

ಲಕ್ನೊ: ಆನೆಯ ಮೇಲೆ ಕುಳಿತುಕೊಂಡು ಯೋಗ ಮಾಡುವ ಯೋಗ ಗುರು ರಾಮ್ ದೇವ್ ಅವರ  ಪ್ರಯತ್ನ ತಿರುಗುಬಾಣವಾಗಿ ಪರಿಣಮಿಸಿದೆ. ಈ ರೀತಿ ಯೋಗ ಮಾಡಲು ಹೋದ ರಾಮ್ ದೇವ್ ಆನೆಯಿಂದ ಬಿದ್ದಿರುವ ಘಟನೆಯ ವೀಡಿಯೊವು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಟ್ವಿಟರಿಗರಿಂದ ಖಾರವಾದ ಪ್ರತಿಕ್ರಿಯೆ ವ್ಯಕ್ತವಾಗಿದೆ.

ವೀಡಿಯೊದಲ್ಲಿ ರಾಮ್ ದೇವ್ ಆನೆಯ ಬೆನ್ನಿನ ಮೇಲೆ ಕುಳಿತು ಯೋಗ ಮಾಡುತ್ತಿರುವುದು ಕಂಡು ಬಂದಿದೆ.ಆದರೆ, ಕ್ಷಣಗಳ ನಂತರ ಆನೆಯು ತನ್ನ ಒಂದು ಕಾಲನ್ನು ಎತ್ತಿ ಮೈ ಕೊಡವಿದ ಕಾರಣ ರಾಮ್ ದೇವ್ ಕೆಳಗೆ ಬಿದ್ದಿದ್ದಾರೆ. ಬಿದ್ದ ನಂತರ ರಾಮದೇವ್  ನಿಧಾನವಾಗಿ ಎದ್ದುಕೊಂಡು ಹೋದರು. ಅಲ್ಲಿಯೇ ಇದ್ದ ಭದ್ರತಾ ಸಿಬ್ಬಂದಿ ಅವರ ನೆರವಿಗೆ ಬಂದರು.

"ಜೋಕರ್ ರಾಮದೇವ್ ಆನೆಯ ಮೇಲೆ ಸರ್ಕಸ್ ಮಾಡಲು ಹೋಗಿ ಬಿದ್ದಿದ್ದಾರೆ'' ಎಂದು ಅರ್ಚನ್ ಗೌಡ ಟ್ವೀಟಿಸಿದ್ದಾರೆ..

"ಈ ದೇಶದಲ್ಲಿನ ಆನೆಗಳು ಮನುಷ್ಯರಿಗಿಂತ ಹೆಚ್ಚು ಬುದ್ದಿವಂತವಾಗಿವೆ. ನಕಲಿ ಯೋಗಿ ತನ್ನ ಪ್ರಚಾರಕ್ಕಾಗಿ ಅವುಗಳನ್ನು ಯಾವಾಗ ಬಳಸುತ್ತಾರೆಂದು ಅವುಗಳಿಗೆ ಚೆನ್ನಾಗಿ ತಿಳಿದಿದೆ'' ಎಂದು ಪೂಜಾ ಪ್ರಿಯಂವದ ಅವರು ಟ್ವೀಟ್ ಮಾಡಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News