ಅಮೆರಿಕ ಚುನಾವಣೆ: ಕೋಟಿಗೂ ಅಧಿಕ ಮತದಾರರಿಂದ ಮತ ಚಲಾವಣೆ!

Update: 2020-10-13 18:08 GMT

ನ್ಯೂಯಾರ್ಕ್, ಅ. 13: ಅಮೆರಿಕದಲ್ಲಿ ನವೆಂಬರ್ 3ರಂದು ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯ ಭಾಗವಾಗಿ, ಈಗಾಗಲೇ ಒಂದು ಕೋಟಿಗೂ ಅಧಿಕ ಮತದಾರರು ತಮ್ಮ ಮತಾಧಿಕಾರವನ್ನು ಚಲಾಯಿಸಿದ್ದಾರೆ!

  2016ರ ಚುನಾವಣೆಯಲ್ಲಿ ಚಲಾವಣೆಯಾದ ಪೂರ್ವ ಮತಗಳಿಗೆ ಹೋಲಿಸಿದರೆ ಹಾಲಿ ಸಂಖ್ಯೆಯು ಗಮನಾರ್ಹ ಹೆಚ್ಚಳವಾಗಿದೆ ಎಂದು ಯುಎಸ್ ಇಲೆಕ್ಷನ್ಸ್ ಪ್ರಾಜೆಕ್ಟ್ ಸಂಗ್ರಹಿಸಿರುವ ಅಂಕಿಅಂಶಗಳು ತಿಳಿಸಿವೆ.

ಕೊರೋನ ವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಭಾರೀ ಸಂಖ್ಯೆಯ ಮತದಾರರು, ಅದರಲ್ಲೂ ಮುಖ್ಯವಾಗಿ ಡೆಮಾಕ್ರಟಿಕ್ ಪಕ್ಷದ ಬೆಂಬಲಿಗರು ಈ ಬಾರಿ ಅಂಚೆ ಮತಗಳ ಮೊರೆ ಹೋಗಿದ್ದಾರೆ.

ಸೋಮವಾರ ರಾತ್ರಿಯ ವೇಳೆಗೆ, ಹಲವಾರು ರಾಜ್ಯಗಳಲ್ಲಿ ಸುಮಾರು 1.04 ಕೋಟಿ ಅವೆುರಿಕನ್ ಮತದಾರರು ತಮ್ಮ ಮತಗಳನ್ನು ಚಲಾಯಿಸಿದ್ದಾರೆ ಎಂದು ಫ್ಲೋರಿಡ ವಿಶ್ವವಿದ್ಯಾನಿಲಯದಲ್ಲಿರುವ ಚುನಾವಣಾ ಮಾಹಿತಿ ಕೇಂದ್ರ ತಿಳಿಸಿದೆ.

ಈ ಹಿಂದಿನ ಚುನಾವಣೆಯಲ್ಲಿ, 2016 ಅಕ್ಟೋಬರ್ 16ರ ವೇಳೆಗೆ ಸುಮಾರು 14 ಲಕ್ಷ ಅಮೆರಿಕನ್ ಮತದಾರರು ಮುಂಚಿತ ಮತಗಳನ್ನು ಚಲಾಯಿಸಿದ್ದರು.

ಈ ಚುನಾವಣೆಯಲ್ಲಿ ಒಟ್ಟು ಸುಮಾರು 15.6 ಕೋಟಿ ಮತದಾರರು ಮತ ಚಲಾಯಿಸುವ ನಿರೀಕ್ಷೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News