×
Ad

ದಕ್ಷಿಣ ಕನ್ನಡ ಜಿಲ್ಲಾ ಸಖಾಫಿ ಕೌನ್ಸಿಲ್ ವತಿಯಿಂದ ಬೇಕಲ್ ಉಸ್ತಾದ್ ರ ಅನುಸ್ಮರಣಾ ಸಂಗಮ

Update: 2020-10-13 23:51 IST

ಮಂಗಳೂರು,ಅ.13:ಕರ್ನಾಟಕ ರಾಜ್ಯ ಸಖಾಫಿ ಕೌನ್ಸಿಲ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಶೈಖುನಾ ತಾಜುಲ್ ಫುಖಹಾಅ್ ಬೇಕಲ್ ಉಸ್ತಾದ್ ರವರ ಹೆಸರಿನಲ್ಲಿ ಅನುಸ್ಮರಣಾ ಸಂಗಮವು  ಮಂಗಳವಾರ ಮರಿಕ್ಕಳ ಮಸೀದಿಯಲ್ಲಿ ಜಿಲ್ಲಾದ್ಯಕ್ಷ ಅಬ್ದುಲ್ ಅಝೀಝ್ ಸಖಾಫಿ ಕೊಳ್ತಿಗೆ ರವರ ಅಧ್ಯಕ್ಷತೆಯಲ್ಲಿ ರಾಜ್ಯ ನಾಯಕ ಡಿಕೆ ಉಮರ್ ಸಖಾಫಿ ಕಂಬಳಬೆಟ್ಟು ರವರ ದುಆದೊಂದಿಗೆ ನಡೆಯಿತು. 

ಕರ್ನಾಟಕ ರಾಜ್ಯ ಸಖಾಫಿ ಕೌನ್ಸಿಲ್ ಪ್ರ.ಕಾರ್ಯದರ್ಶಿ ಕೆಕೆಎಂ ಕಾಮಿಲ್ ಸಖಾಫಿ ಸುರಿಬೈಲ್ ಕಾರ್ಯಕ್ರಮ ಉದ್ಘಾಟಿಸಿದರು.
ಶೈಖುನಾ ಸುಲ್ತಾನುಲ್ ಉಲಮಾ ಕಾಂತಪುರಂ ಎಪಿ ಅಬೂಬಕ್ಕರ್ ಮುಸ್ಲಿಯಾರ್ ಮತ್ತು ಸಯ್ಯಿದ್ ಶಿಹಾಬುದ್ದೀನ್ ಅಲ್ ಹೈದ್ರೂಸಿ ಕಿಲ್ಲೂರು ತಂಙಳ್ ಆನ್ಲೈನ್ ಮುಖಾಂತರ ದುಆ ನಡೆಸಿಕೊಟ್ಟರು. 

ರಾಜ್ಯ ಉಪಾಧ್ಯಕ್ಷ ಸಿಎಚ್ ಮುಹಮ್ಮದ್ ಅಲಿ ಸಖಾಫಿ ಅಶ್ ಅರಿಯ್ಯಾ ಅನುಸ್ಮರಣಾ ಭಾಷಣ ಮಾಡಿದರು. ಜಿಲ್ಲಾ ಸದಸ್ಯರೂ ಮಂಗಳೂರು ತಾಲೂಕು ಕೌನ್ಸಿಲ್ ಅಧ್ಯಕ್ಷರಾದ ಶಿಹಾಬುದ್ದೀನ್ ಕಾಮಿಲ್ ಸಖಾಫಿ ಉಳ್ಳಾಲ ಕೊರೋಣ ಮತ್ತು ಸಂಬಂಧಿತ ವಿಷಯದಲ್ಲಿ ವಿಶೇಷ ತರಗತಿ ನಡೆಸಿದರು. ರಾಜ್ಯಾದ್ಯಕ್ಷ ಪಿಪಿ ಅಹ್ಮದ್ ಸಖಾಫಿ ಕಾಶಿಪಟ್ನ, ಉಪಾಧ್ಯಕ್ಷ  ಕೆಎಂ ಮುಸ್ತಫಾ ನಈಮಿ ಅಸ್ಸಖಾಫಿ ಹಾವೇರಿ, ಜಿಲ್ಲಾ ನಾಯಕ ಅಬ್ದುಲ್ ಖಾದರ್ ಸಖಾಫಿ ಅಲ್ ಮದೀನಾ,ರಾಜ್ಯ ಕಾರ್ಯದರ್ಶಿ ಅಬ್ದುಸ್ಸತ್ತಾರ್ ಸಖಾಫಿ ಅಡ್ಯಾರ್ ಪದವು, ಮರಿಕ್ಕಳ ಮಸೀದಿ ಖತೀಬ್ ಅಬ್ಬಾಸ್ ಸಖಾಫಿ ಕೊಡಗು, ಬೇಕಲ್ ಉಸ್ತಾದ್ ರವರ ಮಗ ಅಬ್ದುಲ್ ಜಲೀಲ್ ಬ್ರೈಟ್, ಜಿಲ್ಲಾ ನಾಯಕರಾದ ಮುಹಮ್ಮದ್ ಸಖಾಫಿ ಪೂಡಲ್, ಇಬ್ರಾಹಿಂ ಸಖಾಫಿ ಸೆರ್ಕಳ,ವಿಕೆ ಅಬ್ದುರ್ರಹ್ಮಾನ್ ಸಖಾಫಿ ,ಸ್ವಲಾಹುದ್ದೀನ್ ಸಖಾಫಿ ಮಾಡನ್ನೂರು,ಹಸನ್ ಸಖಾಫಿ ಬೆಳ್ಳಾರೆ, ಅಬ್ದುರ್ರಝಾಕ್ ಸಖಾಫಿ ಮಡಂತ್ಯಾರ್ ಭಾಷಣ ಮಾಡಿದರು.

ಸುಳ್ಯ, ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಮಂಗಳೂರು ತಾಲೂಕುಗಳ ಸುಮಾರು 125 ಕ್ಕೂ ಅಧಿಕ ಸಖಾಫಿ ವಿದ್ವಾಂಸರು ಭಾಗವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ರಶೀದ್ ಸಖಾಫಿ ಗಡಿಯಾರ ಸ್ವಾಗತಿಸಿರು. ಜಿಲ್ಲಾ ಪ್ರ.ಕಾರ್ಯದರ್ಶಿ ಸಿದ್ದೀಖ್ ಸಖಾಫಿ ಕಾಯಾರ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News