×
Ad

ತೈವಾನ್ ಆಧುನಿಕ ಶಸ್ತ್ರಾಸ್ತ್ರಗಳ ಮಾರಾಟ ಕರಾರಿಗೆ ಅಮೆರಿಕ ಚಾಲನೆ

Update: 2020-10-13 23:51 IST

 ವಾಶಿಂಗ್ಟನ್, ಅ. 13: ತೈವಾನ್‌ಗೆ ಆಧುನಿಕ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡುವುದಕ್ಕೆ ಸಂಬಂಧಿಸಿದ ಮೂರು ಕರಾರುಗಳಿಗೆ ಶ್ವೇತಭವನ ಚಾಲನೆ ನೀಡಿದೆ. ಈ ಕರಾರುಗಳಿಗೆ ಅಂಗೀಕಾರ ನೀಡುವಂತೆ ಕೋರಿ ಅದು ಸಂಸತ್ತು ಕಾಂಗ್ರೆಸ್‌ಗೆ ಅಧಿಸೂಚನೆಯೊಂದನ್ನು ನೀಡಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ‘ರಾಯ್ಟರ್ಸ್’ ಸುದ್ದಿ ಸಂಸ್ಥೆ ವರದಿ ಮಾಡಿದೆ.

ನವೆಂಬರ್ 3ರ ಅಧ್ಯಕ್ಷೀಯ ಚುನಾವಣೆಗೆ ಮುನ್ನ ಈ ಬೆಳವಣಿಗೆಗಳು ನಡೆದಿದ್ದು, ಚೀನಾದ ಕೆಂಗಣ್ಣಿಗೆ ಗುರಿಯಾಗುವುದು ಖಚಿತವಾಗಿದೆ. ಈಗ ಸ್ವಯಮಾಡಳಿತವಿರುವ ತೈವಾನ್,  ಚೀನಾಕ್ಕೆ ಒಳಪಟ್ಟಿದೆ ಹಾಗೂ ಅಗತ್ಯ ಬಿದ್ದರೆ ಒಂದು ದಿನ ಬಲಪ್ರಯೋಗದ ಮೂಲಕವಾದರೂ ಅದನ್ನು ತಾಯ್ನೆಲಕ್ಕೆ ಸೇರಿಸಿಕೊಳ್ಳಲಾಗುವುದು ಎಂದು ಚೀನಾ ಹಲವು ಸಂದರ್ಭಗಳಲ್ಲಿ ಹೇಳಿದೆ.

ಏಳು ಪ್ರಮುಖ ಶಸ್ತ್ರಾಸ್ತ್ರಗಳನ್ನು ತೈವಾನ್‌ಗೆ ಮಾರಾಟ ಮಾಡಲು ಅಮೆರಿಕ ಉದ್ದೇಶಿಸಿದೆ. ಚೀನಾದ ಮೇಲಿನ ಒತ್ತಡವನ್ನು ಹೆಚ್ಚಿಸುವ ಯೋಜನೆಯ ಭಾಗವಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರಕಾರ ಈ ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News