ಭಾರತದ ತಲಾ ಜಿಡಿಪಿ ಬಾಂಗ್ಲಾದೇಶಕ್ಕಿಂತಲೂ ಕಡಿಮೆಯಾಗಲಿದೆ:ಐಎಂಎಫ್ ವರದಿ

Update: 2020-10-14 08:27 GMT

 ಹೊಸದಿಲ್ಲಿ :  ಭಾರತದ  ಆರ್ಥಿಕತೆ ಈ ವರ್ಷ ಶೇ 10.3ರಷ್ಟು ಸಂಕುಚಿತಗೊಳ್ಳುವ ನಿರೀಕ್ಷೆಯಿರುವುದರಿಂದ ದೇಶದ ತಲಾ ಒಟ್ಟು ದೇಶೀಯ ಉತ್ಪನ್ನ ಅಥವಾ ತಲಾ ಜಿಡಿಪಿ ಬಾಂಗ್ಲಾದೇಶದ ತಲಾ ಜಿಡಿಪಿಗಿಂತಲೂ ಕಡಿಮೆಯಾಗಲಿದೆ ಎಂದು ಅಂತರ ರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್) ಹೇಳಿದೆ. ಇದು ಐಎಂಎಫ್ ಈ ವರ್ಷದ ಜೂನ್ ತಿಂಗಳಲ್ಲಿ  ಮಾಡಿದ ಅಂದಾಜಿಗಿಂತಲೂ ಬಹಳಷ್ಟು ಕಡಿಮೆಯಾಗಿದೆ.

ಮಂಗಳವಾರ ಬಿಡುಗಡೆಯಾದ ಐಎಂಎಫ್‍ನ ``ವಲ್ಡ್೵ ಇಕನಾಮಿಕ್ ಔಟ್ ಲುಕ್' ವರದಿಯ ಪ್ರಕಾರ ಮಾರ್ಚ್ 31, 2021ರಂದು ಅಂತ್ಯಗೊಳ್ಳಲಿರುವ ಈ ಆರ್ಥಿಕ ವರ್ಷದಲ್ಲಿ ಭಾರತದ ತಲಾ ಜಿಡಿಪಿ ಶೇ 10.3ರಷ್ಟು ಕುಸಿಯಲಿದೆ. ಜೂನ್ ತಿಂಗಳಲ್ಲಿ ಐಎಂಎಫ್ ಮಾಡಿದ್ದ ಅಂದಾಜಿನ ಪ್ರಕಾರ ಜಿಡಿಪಿ ಶೇ. 4ರಷ್ಟು ಕುಸಿಯುವ ನಿರೀಕ್ಷೆಯಿತ್ತು.

ಅತ್ತ ಬಾಂಗ್ಲಾದೇಶದ ತಲಾ ಜಿಡಿಪಿ  2020ರಲ್ಲಿ ಶೇ. 4ರಷ್ಟು ಏರಿಕೆಯಾಗುವ ನಿರೀಕ್ಷೆಯಿದೆ ಎಂದು ಐಎಂಎಫ್ ವರದಿ ಹೇಳಿದೆ.

ಅದೇ ಸಮಯ ಭಾರತದ ಆರ್ಥಿಕತೆ 2021ರಲ್ಲಿ ಶೇ.. 8.8ರಷ್ಟು ಪ್ರಗತಿ ಕಂಡು ಮತ್ತೆ ಪುಟಿದೇಳಲಿದೆ ಹಾಗೂ  ಚೀನಾವನ್ನೂ ಹಿಮ್ಮೆಟ್ಟಿಸಿ ಶೇ. 8.2ರಷ್ಟು ಪ್ರಗತಿ ದರದೊಂದಿಗೆ ಜಗತ್ತಿನ ಅಭಿವೃದ್ಧಿಗೊಳ್ಳುತ್ತಿರುವ ರಾಷ್ಟ್ರಗಳ ಪೈಕಿ ಅತ್ಯಂತ ವೇಗವಾಗಿ ಬೆಳೆಯುವ ಆರ್ಥಿಕತೆಯಾಗಲಿದೆ ಎಂದು ಐಎಂಎಫ್ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News