×
Ad

ಗುಜರಾತ್‌ನ ತನಿಷ್ಕ್ ಚಿನ್ನಾಭರಣ ಮಳಿಗೆಗೆ ಬೆದರಿಕೆ ಕರೆ

Update: 2020-10-14 15:35 IST

ಹೊಸದಿಲ್ಲಿ: ಗುಜರಾತ್‌ನ ಕಛ್ ಜಿಲ್ಲೆಯಲಿರುವ ಪ್ರಖ್ಯಾತ ತನಿಷ್ಕ್ ಚಿನ್ನಾಭರಣ ಮಳಿಗೆೆಗೆ ಬೆದರಿಕೆ ಕರೆ ಬಂದಿದ್ದು, ಪ್ರದೇಶದ ಸುತ್ತಮುತ್ತ ಪೊಲೀಸರು ಗಸ್ತು ನಡೆಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

 ತನಿಷ್ಕ್‌ನ ಜಾಹೀರಾತು ಉತ್ತಮ ಅಭಿರುಚಿಯಿಂದ ಕೂಡಿಲ್ಲ. ಇದು ಭಾವನೆಗಳಿಗೆ ಧಕ್ಕೆ ಉಂಟು ಮಾಡಿದೆ ಎಂದು ಕೆಲವು ಜನರು ಹೇಳಿದ್ದು, ಕೆಲವು ಬೆದರಿಕೆ ಕರೆಗಳನ್ನು ಸ್ವೀಕರಿಸಲಾಗಿದೆ. ಪೊಲೀಸರು ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದಾರೆ. ಯಾವುದೇ ದಂಗೆ, ಪ್ರತಿಭಟನೆ ಅಥವಾ ದಾಳಿ ನಡೆದಿಲ್ಲ ಎಂದು ಮಳಿಗೆಯ ಮೇಲೆ ದಾಳಿ ನಡೆದಿದೆ ಎಂಬ ವರದಿಯನ್ನು ಪೊಲೀಸ್ ಅಧಿಕಾರಿ ನಿರಾಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News