ಕೊರೋನಾ ಸೇವೆಗಾಗಿ 143 ಹೆಚ್ಚುವರಿ ಸಿಬ್ಬಂದಿ: ಡಾ.ಮಧುಸೂದನ್
ಉಡುಪಿ, ಅ.14: ಕೋವಿಡ್-19 ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಉಡುಪಿ ಜಿಲ್ಲೆಯ ಸರಕಾರಿ ಆಸ್ಪತ್ರೆಗಳಿಗೆ ಒಟ್ಟು 143 ಹೆಚ್ಚುವರಿ ಸಿಬ್ಬಂದಿ ಗಳನ್ನು ಒದಗಿಸಿದ್ದು, ಈ ಮೂಲಕ ಕೊರೋನಾ ವಾರಿಯರ್ಸ್‌ಗಳು ಕೋವಿಡ್ ವಿರುದ್ಧ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದ್ದಾರೆಂದು ಉಡುಪಿ ಜಿಲ್ಲಾ ಸರ್ಜನ್ ಡಾ.ಮಧುಸೂದನ್ ನಾಯಕ್ ತಿಳಿಸಿದ್ದಾರೆ.
ಉಡುಪಿಯ ಕೊರೋನಾ ವಾರಿಯರ್ಸ್‌ಗಳಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಶಿಫಾರಸಿನ ಮೇರೆಗೆ ಇಸ್ಕಾನ್ ವತಿಯಿಂದ ಇಂದು ಪ್ರವಾಸಿ ಮಂದಿರದಲ್ಲಿ ಆಯೋಜಿಸಲಾದ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.
ಉಡುಪಿ ಜಿಲ್ಲಾಸ್ಪತ್ರೆಗೆ 10 ವೈದ್ಯರು, 20 ಸ್ಟಾಪ್ ನರ್ಸ್‌ಗಳು, 5 ಲ್ಯಾಬ್ ಟೆಕ್ನಿಶಿಯನ್‌ಗಳು, 10 ಗ್ರೂಪ್ ಡಿ ನೌಕರರು, ಕುಂದಾಪುರ ಮತ್ತು ಕಾರ್ಕಳ ತಾಲೂಕು ಆಸ್ಪತ್ರೆಗಳಿಗೆ ಒಟ್ಟು 29 ಸ್ಟಾಪ್ ನರ್ಸ್‌ಗಳು ಮತ್ತು 29 ಗ್ರೂಪ್ ಡಿ ನೌಕರರನ್ನು ನೀಡಲಾಗಿದೆ. ಅದೇ ರೀತಿ ಇಡೀ ಜಿಲ್ಲೆಗೆ 20 ಲ್ಯಾಬ್ ಟೆಕ್ನಿಶಿಯನ್ಸ್ ಮತ್ತು 20 ಡೇಟಾ ಎಂಟ್ರಿ ಆಪರೇಟರ್‌ಗಳ್ನು ಕೂಡ ಒದಗಿಸ ಲಾಗಿದೆ ಎಂದರು.
ಕೊರೋನಾ ವಾರಿಯರ್ಸ್‌ಗಳು ಆರಂಭದಲ್ಲಿ ಕೊರೋನ ರೋಗಿಗಳಿಗೆ ಚಿಕಿತ್ಸೆ ನೀಡಲು ಭಯ ಪಡುತ್ತಿದ್ದರೆ ಈಗ ಯಾವುದೇ ರೀತಿಯಲ್ಲಿ ಸಮಸ್ಯೆ ಆಗದಂತೆ ರಾತ್ರಿ ಹಗಲು ಎನ್ನದೆ ಚಿಕಿತ್ಸೆ ನೀಡುತ್ತಿದ್ದಾರೆ. ಈ ಕಾಯಿಲೆಗೆ ಸರಿ ಯಾದ ಚಿಕಿತ್ಸೆ ಹಾಗೂ ಲಸಿಕೆ ಬರುವವರೆಗೆ ಇದನ್ನು ಹತೋಟಿಗೆ ತರುವುದು ಅಸಾಧ್ಯ ಎಂದು ಅವರು ಹೇಳಿದರು.
ಇಸ್ಕಾನ್ ಮಂಗಳೂರು ಕಾರ್ಯದರ್ಶಿ ಸನಂದನದಾಸ ಸ್ವಾಮೀಜಿ ಮಾತ ನಾಡಿ, ಕೊರೋನ ವಾರಿಯರ್ಸ್‌ಗಳ ಸೇವೆ ಅನನ್ಯ. ದೇಶದ ಭದ್ರತೆಯಷ್ಟೆ ಆರೋಗ್ಯ ಕೂಡ ಬಹಳ ಮುಖ್ಯವಾದುದು. ಆ ನಿಟ್ಟಿನಲ್ಲಿ ಕೊರೋನಾ ವಾರಿ ಯರ್ಸ್‌ಗಳು ಆರೋಗ್ಯ ಬಗ್ಗೆ ಕೆಲ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಕುಂದಾಪುರ ಮಹಿಳಾ ಸಾಂತ್ವನ ಕೇಂದ್ರದ ರಾಧಾದಾಸ್, ನಗರಸಭೆ ಸದಸ್ಯೆ ರಶ್ಮಿ ಚಿತ್ತರಂಜನ್ ಭಟ್, ಬಿಜೆಪಿ ರಾಜ್ಯ ಹಿಂದುಳಿದ ಮೋರ್ಚಾದ ಕಾರ್ಯದರ್ಶಿ ವಿಠಲ ಪೂಜಾರಿ, ಕೋಟ ಶಿವರಾಮ ಕಾರಂತ ಥೀಮ್ ಪಾರ್ಕ್‌ನ ಟ್ರಸ್ಟಿ ಸುಬ್ರಾಯ ಆಚಾರ್ಯ, ಸಾಮಾಜಿಕ ಕಾರ್ಯಕರ್ತ ವಾಸುದೇವ ಭಟ್ ಉಪಸ್ಥಿತರಿದ್ದರು. ಸಚಿವ ಕೋಟ ಶ್ರೀನಿವಾಸ ಪೂಜಾರಿಯ ವರ ಆಪ್ತ ಸಹಾಯಕ ಹರೀಶ್ ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.