×
Ad

ಯುಡಿಎಫ್ ತೊರೆದ ಕೇರಳ ಕಾಂಗ್ರೆಸ್ (ಎಂ) ಪಕ್ಷ

Update: 2020-10-14 20:49 IST

ಕೊಟ್ಟಾಯಂ(ಕೇರಳ):ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟದೊಂದಿಗಿನ ದಶಕಗಳ ನಂಟನ್ನು ಕಡಿದುಕೊಳ್ಳಲು ರಾಜ್ಯಸಭಾ ಸದಸ್ಯ ಜೋಸ್ ಕೆ. ಮಾಣಿ ನೇತೃತ್ವದ ಕೇರಳ ಕಾಂಗ್ರೆಸ್ (ಎಂ)ನಿರ್ಧರಿಸಿದ್ದು, ರಾಜ್ಯದಲ್ಲಿ ಎಲ್ ಡಿಎಫ್ ಜೊತೆಗೆ ಕೈಜೋಡಿಸಲು ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.

ಪ್ರಮುಖ ಪ್ರಾದೇಶಿಕ ಪಕ್ಷಗಳಲ್ಲಿ ಒಂದಾದ ಕೇರಳ ಕಾಂಗ್ರೆಸ್(ಎಂ)ಪಕ್ಷದ ಈ ನಿರ್ಧಾರ ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಗೂ ಮುನ್ನವೇ ಆಡಳಿತಾರೂಢ ಎಲ್ ಡಿಎಫ್ ಗೆ ಮತ್ತಷ್ಟು ಬಲ ತಂದಿದೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಪಕ್ಷದ ನಿರ್ಧಾರದ ಕುರಿತು ಪ್ರಕಟಿಸಿದ ಮಾಣಿ ಅವರು ಎಲ್ ಡಿಎಫ್ ನಾಯಕತ್ವವು ತಮ್ಮ ಪಕ್ಷವನ್ನು ಸೇರ್ಪಡೆಗೊಳಿಸಿಕೊಳ್ಳುವ ವಿಶ್ವಾಸವಿದೆ ಎಂದು ಹೇಳಿದರು.

ಮಾಣಿ ಅವರ ನಿರ್ಧಾರವನ್ನು ಟೀಕಿಸಿರುವ ಯುಡಿಎಫ್ ನಾಯಕರು, ಮಾಣಿ ಅವರನ್ನು ಯುಡಿಎಫ್ ರಾಜ್ಯಸಭಾ ಸದಸ್ಯರನ್ನಾಗಿ ಮಾಡಿತ್ತು. ಆದರೆ ಅವರು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಬೆನ್ನಿಗೆ ಚೂರಿ ಹಾಕಿದರು ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News