×
Ad

ಸನ್ನದುದಾರರು ಮದ್ಯ ಖರೀದಿಸದೆ ಪರ್ಮಿಟ್ ಚಳುವಳಿ

Update: 2020-10-14 21:13 IST

ಉಡುಪಿ, ಅ.14: ರಾಜ್ಯದ ಚಿಲ್ಲರೆ ಮದ್ಯ ಮಾರಾಟಗಾರರ ಪ್ರಸ್ತುತ ಸಮಸ್ಯೆ ಮತ್ತು ಬಹುಕಾಲದ ಬೇಡಿಕೆಗಳ ಬಗ್ಗೆ ಸರಕಾರದ ಗಮನ ಸೆಳೆಯುವ ಉದ್ದೇಶ ದಿಂದ ಫೆಡರೇಶನ್ ಆಫ್ ವೈನ್ ಮರ್ಚಂಟ್ಸ್ ಅಸೋಸಿಯೇಶನ್ ವತಿಯಿಂದ ಸನ್ನದುದಾರರು ಮದ್ಯ ಖರೀದಿಸದೆ ಬುಧವಾರ ಒಂದು ದಿನದ ಪರ್ಮಿಟ್ ಚಳುವಳಿ ನಡೆಸಿದರು.

ರಾಜ್ಯದಲ್ಲಿ ಪ್ರತಿದಿನ 1500 ಸನ್ನದುದಾರರು ಮದ್ಯ ಖರೀದಿಸುತ್ತಿದ್ದು, ಈ ಚಳವಳಿಯಿಂದಾಗಿ ಇಂದು ಕೇವಲ 84 ಎಂಎಸ್‌ಐಎಲ್ ಸನ್ನದು ದಾರರು ಮಾತ್ರ ಮದ್ಯ ಖರೀದಿಸಿದ್ದಾರೆ. ಪ್ರತಿದಿನ ನಡೆಯುತ್ತಿದ್ದ 1.60ಲಕ್ಷ ಬಾಕ್ಸ್ ಮದ್ಯ ಖರೀದಿಯ ಬದಲು ಇಂದು ಕೇವಲ 7082 ಬಾಕ್ಸ್ ಮಾತ್ರ ಖರೀದಿ ಯಾಗಿದೆ. ಬಿಯರ್ 60000 ಬಾಕ್ಸ್ ಬದಲು 2532 ಬಾಕ್ಸ್ ಖರೀದಿಯಾಗಿದೆ ಎಂದು ಫೆಡರೇಶನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ. ಗೋವಿಂದ ರಾಜ್ ಹೆಗ್ಡೆ ತಿಳಿಸಿದ್ದಾರೆ.

ಆನ್‌ಲೈನ್ ಮದ್ಯ ಮಾರಾಟದ ಪ್ರಸ್ತಾಪವನ್ನು ಕೈಬಿಡಬೇಕು. 2011ರ ಜನಗಣತಿಯ ಪ್ರಕಾರ 5000 ಅಥವಾ ಅದಕ್ಕಿಂತ ಹೆಚ್ಚು ಜನಸಂಖ್ಯೆಯುಳ್ಳ ಗ್ರಾಪಂ ವ್ಯಾಪ್ತಿಯಲ್ಲಿ ಹಾದು ಹೋಗುವ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಇಕ್ಕೆಲಗಳಲ್ಲಿ ಸಿಎಲ್ 6ಎ ಮತ್ತು ಸಿಎ-7 ಸನ್ನದುಗಳನ್ನು ಆರಂಭಿಸಲು ನೀಡಿ ರುವ ಅುಮತಿಯನ್ನು ರದ್ದುಪಡಿಸಬೇಕು.

ಹೊಸ ಎಂ.ಎಸ್.ಐ.ಎಲ್. ಅಂಗಡಿಗಳನ್ನು ತೆರೆಯುವುದನ್ನು ತಡೆಹಿಡಿಯ ಬೇಕು. ಕೊರೋನಾ ಲಾಕ್‌ಡೌನ್ ಸಂದರ್ಭದಲ್ಲಿ ಸನ್ನದುದಾರರಿಗೆ ಆಗಿರುವ ನಷ್ಟಕ್ಕೆ ಪರಿಹಾರ ನೀಡಬೇಕು. ಅಬಕಾರಿ ಅಧಿಕಾರಿಗಳು ಲಂಚ ಮಾಮೂಲಿ ಹಣಕ್ಕಾಗಿ ಸನ್ನದುದಾರರಿಗೆ ತುಂಬಾ ತೊಂದರೆ ನೀಡುವುದರ ಬಗ್ಗೆ ಕ್ರಮ ತೆಗೆದು ಕೊಳ್ಳಬೇಕು. ಕೋವಿಡ್ ಸಂದರ್ಭದಲ್ಲಿ ಹೆಚ್ಚಳ ಮಾಡಿರುವ ಹೆಚ್ಚುವರಿ ಅಬ ಕಾರಿ ಶುಲ್ಕವನ್ನು ಕಡಿಮೆ ಮಾಡಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ ಎಂದು ಬಿ.ಗೋವಿಂದರಾಜ್ ಹೆಗ್ಡೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News