ಕೊಂಕಣ ರೈಲು ಮಾರ್ಗದಲ್ಲಿ ಜಾಮ್‌ನಗರ- ತಿರುನಲ್ವೇಲಿ ನಡುವೆ ರೈಲು ಸಂಚಾರ
ಉಡುಪಿ, ಅ.14: ಜಾಮ್‌ನಗರ- ತಿರುನಲ್ವೇಲಿ-ಜಾಮ್‌ನಗರ ನಡುವೆ ವಾರಕ್ಕೆ ಎರಡು ದಿನ ವಿಶೇಷ ಎಕ್ಸ್‌ಪ್ರೆಸ್ ರೈಲು ಪಶ್ಚಿಮ ರೈಲ್ವೆಯ ಸಮನ್ವಯ ದೊಂದಿಗೆ ಕೊಂಕಣ ರೈಲು ಮಾರ್ಗದಲ್ಲಿ ಓಡಾಟ ನಡೆಸಲಿದೆ ಎಂದು ಕೊಂಕಣ ರೈಲ್ವೆಯ ಪ್ರಕಟಣೆ ತಿಳಿಸಿದೆ.
ರೈಲು ನಂ. 09578 ಜಾಮ್‌ನಗರ- ತಿರುನಲ್ವೇಲಿ ವಿಶೇಷ ರೈಲು ನವೆಂಬರ್ 6ರಿಂದ ಪ್ರತಿ ಶುಕ್ರವಾರ ಮತ್ತು ಶನಿವಾರ ರಾತ್ರಿ 9 ಗೆ ಜಾಮ್‌ನಗರದಿಂದ ನಿರ್ಗಮಿಸಲಿದ್ದು, ಮೂರನೇ ದಿನ ರಾತ್ರಿ 10:10ಕ್ಕೆ ತಿರುನಲ್ವೇಲಿಯನ್ನು ತಲುಪಲಿದೆ.
ಅದೇ ರೀತಿ ರೈಲು ನಂ.09577 ತಿರುನಲ್ವೇಲಿ- ಜಾಮ್‌ನಗರ ದ್ವಿ-ಸಪ್ತಾಹ ವಿಶೇಷ ರೈಲು ನವೆಂಬರ್ 9ರಿಂದ ಪ್ರತಿ ಸೋಮವಾರ ಹಾಗೂ ಮಂಗಳವಾರ ದಂದು ಬೆಳಗ್ಗೆ 7:45ಕ್ಕೆ ತಿರುನಲ್ವೇಲಿಯಿಂದ ಹೊರಡಲಿದ್ದು, ಅದು ಜಾಮ್‌ನಗರವನ್ನು ಮೂರನೇ ಸಂಜೆ 5:15ಕ್ಕೆ ತಲುಪಲಿದೆ.
ಈ ರೈಲಿಗೆ ಹಾಪಾ, ರಾಜ್‌ಕೋಟ್, ಸುರೇಂದ್ರನಗರ, ಅಹ್ಮದಾಬಾದ್ ಜಂಕ್ಷನ್, ವಡೋದರಾ ಜಂಕ್ಷನ್, ಅಂಕಿಲೇಶ್ವರ್, ಸೂರತ್, ವಾಪಿ, ವಾಸಿ ರೋಡ್, ಪನ್ವೇಲ್, ರತ್ನಗಿರಿ, ಮಡಗಾಂವ್ ಜಂಕ್ಷನ್, ಕಾರವಾರ, ಉಡುಪಿ, ಮಂಗಳೂರು ಜಂಕ್ಷನ್, ಕಾಸರಗೋಡು, ಕಣ್ಣೂರು, ಕೋಝಿಕೋಡ್, ಶೊರೋನೂರ್ ಜಂಕ್ಷನ್, ತ್ರಿಶೂರು, ಅಲುವ, ಎರ್ನಾಕುಲಂ ಜಂಕ್ಷನ್, ಅಲಪ್ಪುರಂ, ಕೊಲ್ಲಂ ಜಂಕ್ಷನ್, ತಿರುವನಂತಪುರ ಸೆಂಟ್ರಲ್, ನಾಗರಕೋಯಿಲ್ ಹಾಗೂ ವಲ್ಲಿಯೂರ್ ಸ್ಟೇಶನ್‌ಗಳಲ್ಲಿ ನಿಲುಗಡೆ ಇರುತ್ತದೆ.
ಈ ರೈಲಿನಲ್ಲಿ ಒಟ್ಟು 23 ಕೋಚ್‌ಗಳಿದ್ದು, 2ಟಯರ್ ಎಸಿ-1, 3ಟಯರ್ ಎಸಿ-5ಕೋಚ್, ಸ್ಲೀಪರ್-11, ಸೆಕೆಂಡ್ ಸೀಟಿಂಗ್-4 ಕೋಚ್, ಎಸ್‌ಎಲ್‌ಆರ್-2 ಕೋಚ್‌ಗಳಿರುತ್ತವೆ ಎಂದು ಕೊಂಕಣ ರೈಲ್ವೆಯ ಪ್ರಕಟಣೆ ತಿಳಿಸಿದೆ.