ಎಸ್‌ಡಿಪಿಐನಿಂದ ಜಾಗೋ ಕಿಸಾನ್ ಅಭಿಯಾನ
Update: 2020-10-14 21:50 IST
ಮಂಗಳೂರು, ಅ.14: ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರಕಾರ ಜಾರಿಗೊಳಿಸಿದ ಕರಾಳ ಕೃಷಿ ಕಾನೂನು ವಿರುದ್ಧ ಎಸ್‌ಡಿಪಿಐ ದ.ಕ. ಜಿಲ್ಲಾದ್ಯಂತ ಅಕ್ಟೋಬರ್ ತಿಂಗಳಿನಲ್ಲಿ ‘ಜಾಗೋ ಕಿಸಾನ್ ಕೃಷಿ-ಸಂಹಾರ ಬಿಜೆಪಿಯ ಹುನ್ನಾರ’ ಹೆಸರಿನಲ್ಲಿ ಅಭಿಯಾನ ಕೈಗೊಂಡಿದೆ.
ಜಿಲ್ಲಾಧ್ಯಂತ ಭಿತ್ತಿಪತ್ರ ಅಂಟಿಸುವುದು, ಕರಪತ್ರ ವಿತರಣೆ, ರೈತ ಮತ್ತು ಸಮಾನ ಮನಸ್ಕ ಸಂಘಟನೆಗಳ ನಾಯಕರೊಂದಿಗೆ ಸಮಾಲೋಚನಾ ಸಭೆ, ಪಾದಯಾತ್ರೆ, ಕಾರ್ನರ್ ಮೀಟ್, ಮಾನವ ಸರಪಳಿಯಂತಹ ವಿವಿಧ ಕಾರ್ಯಕ್ರಮಗಳ ಮೂಲಕ ಅಭಿಯಾನ ನಡೆಯಲಿದೆ.
ಅಭಿಯಾನ ಉದ್ಘಾಟನಾ ಕಾರ್ಯಕ್ರಮವು ಕಡಬ ತಾಲೂಕಿನ ಕೊಂಬಾರ್ ಗ್ರಾಮದ ಗದ್ದೆಯಲ್ಲಿ ವಿಭಿನ್ನ ರೀತಿಯಲ್ಲಿ ನಡೆಯಲಿದೆ. ಅಭಿಯಾನವು ಅ.31ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾದ್ಯಂತ ವಿವಿಧೆಡೆ ಮಾನವ ಸರಪಳಿ ನಡೆಸುವ ಮೂಲಕ ಸಮಾಪ್ತಿಗೊಳ್ಳಲಿದೆ ಎಂದು ಜಾಗೋ ಕಿಸಾನ್ ಅಭಿಯಾನದ ಜಿಲ್ಲಾ ಉಸ್ತುವಾರಿ ಆ್ಯಂಟನಿ ಪಿ.ಡಿ. ಪ್ರಕಟನೆಯಲ್ಲಿ ತಿಳಿಸಿದ್ದಾರೆ.