3 ಗಂಟೆ 3 ನಿಮಿಷದಲ್ಲಿ ಬಾಹ್ಯಾಕಾಶ ನಿಲ್ದಾಣ ತಲುಪಿದ ಗಗನಯಾನಿಗಳು

Update: 2020-10-14 16:25 GMT

ಅಲ್ಮಾಟಿ (ಕಝಖ್‌ಸ್ತಾನ್), ಅ. 14: ಕಝಖ್‌ಸ್ತಾನದಲ್ಲಿರುವ ಬೈಕನೂರು ಬಾಹ್ಯಾಕಾಶ ಉಡ್ಡಯನ ಕೇಂದ್ರದಿಂದ ಬುಧವಾರ ಹಾರಿದ ಮೂವರು ಗಗನಯಾನಿಗಳನ್ನು ಹೊತ್ತ ಗಗನನೌಕೆಯು ದಾಖಲೆಯ 3 ಗಂಟೆ ಮತ್ತು 3 ನಿಮಿಷಗಳಲ್ಲಿ ಅಂತರ್‌ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ತಲುಪಿದೆ ಎಂದು ರಶ್ಯದ ಬಾಹ್ಯಾಕಾಶ ಸಂಸ್ಥೆ ‘ರಾಸ್ಕೋಸ್ಮಾಸ್’ ಹೇಳಿದೆ.

ಮಾನವಸಹಿತ ಗಗನನೌಕೆಯೊಂದು ಬಾಹ್ಯಾಕಾಶದಲ್ಲಿ ತಿರುಗುತ್ತಿರುವ ಅಂತರ್‌ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣಿಸಿದ ಗರಿಷ್ಠ ವೇಗ ಇದಾಗಿದೆ.

ಸೋಯಝ್ ಗಗನ ನೌಕೆಯು ಬಾಹ್ಯಾಕಾಶ ನಿಲ್ದಾಣಕ್ಕೆ ಯಶಸ್ವಿಯಾಗಿ ಜೋಡಣೆಯಾಗಿರುವುದನ್ನು ರಾಸ್ಕೋಸ್ಮಾಸ್ ಟ್ವೀಟೊಂದರಲ್ಲಿ ಖಚಿತಪಡಿಸಿದೆ. ಈ ಪ್ರಯಾಣಕ್ಕೆ ದಾಖಲೆಯ 3 ಗಂಟೆ 3 ನಿಮಿಷಗಳು ಸಾಕಾದವು ಎಂದು ರಶ್ಯದ ಸುದ್ದಿ ಸಂಸ್ಥೆ ಆರ್‌ಐಎ ನೊವೊಸ್ತಿ ವರದಿ ಮಾಡಿದೆ.

ಸಾಮಾನ್ಯವಾಗಿ ಈ ಪ್ರಯಾಣಕ್ಕೆ ಸುಮಾರು 6 ಗಂಟೆಗಳು ಬೇಕಾಗುತ್ತವೆ. 2013ರ ಮೊದಲು ಎರಡು ದಿನಗಳು ಬೇಕಾಗಿದ್ದವು.

ರಶ್ಯದ ಸರ್ಗಿ ರಿಝಿಕೊವ್ ಮತ್ತು ಸರ್ಗಿ ಕುಡ್-ಸ್ವೆರ್ಚ್‌ಕೊವ್ ಹಾಗೂ ಅಮೆರಿಕದ ಕ್ಯಾತ್ಲೀನ್ ರೂಬಿನ್ಸ್ ಬೈಕನೂರು ಉಡ್ಡಯನ ಕೇಂದ್ರದ ಮೂಲಕ ಅಂತರ್‌ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಸೇರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News