ಬೆಳ್ತಂಗಡಿ ತಾಲೂಕಿನಲ್ಲಿ ಭಾರೀ ಮಳೆ

Update: 2020-10-14 16:40 GMT

ಬೆಳ್ತಂಗಡಿ : ತಾಲೂಕಿನಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಮಳೆ ಸುರಿಯುತ್ತಿದ್ದು ನದಿಹಳ್ಳಗಳು ತುಂಬಿ ಹರಿಯುತ್ತಿದೆ. ಕೊಕ್ಕಡ ಸಮೀಪ ಪೆರಿಯಶಾಂತಿ ಧರ್ಮಸ್ಥಳ ರಸ್ತೆಯಲ್ಲಿ ಕಿರು ಸೇತುವೆಯೊಂದರಮೇಲೆ ನೀರು ನುಗ್ಗಿ ರಾಜ್ಯ ಹೆದ್ದಾರಿಯಲ್ಲಿ ರಸ್ತೆ ಸಂಚಾರ ಕೆಲ ಹೊತ್ತು ಸ್ಥಗಿತ ಗೊಂಡಿತ್ತು. ವಾಹನಗಳು ಶ್ರಮ ಪಟ್ಟು ನೀರಿನಲ್ಲಿಯೇ ಸಂಚರಿಸಿದವು.

ಸರಾಗವಾಗಿ ನೀರು ಹರಿದು ಹೋಗದ ಕಾರಣ ಉಜಿರೆಯಲ್ಲಿಯೂ ಚರಂಡಿಗಳು ತುಂಬಿ ಹರಿದು  ರಸ್ತೆಯಲ್ಲಿ ನೀರು ಉಕ್ಕಿ ಹರಿಯುತ್ತಿತ್ತು. 

ನೆರಿಯ ಗ್ರಾಮದ ಕೋಲ್ನ ಎಂಬಲ್ಲಿ ಶೆಖರ್ ಎಂಬವರ ಮನೆಯ ಮುಂದೆ ಭೂಕುಸಿತವಾಗಿದ್ದು ಕೃಷಿಗೆ ಹಾನಿಯಾಗಿದೆ. ಕಣಿಯೂರು ಮಾವಿನಕಟ್ಟೆ ಎಂಬಲ್ಲಿ ಸಂಪತ್ ಕುಮಾರ್ ಎಂಬವರ ಮನೆಯ ಹಿಂಬದಿಯ ಗುಡ್ಡ ಕುಸಿದು ಬಿದ್ದಿದೆ ಮನೆಹೆ ಹಾನಿಯಾಗಿದೆ.
ಉಜಿರೆಯಲ್ಲಿ ಆವರಣಗೋಡೆ ಕುಸಿದು ಬಿದ್ದಿದ್ದು ಮನೆಗೆ ಹಾನಿಯಾಗಿದೆ. ಹಲವೆಡೆ ನದಿ ನೀರು ಕೃಷಿ ಭೂಮಿಗೂ ನುಗ್ಗಿದೆ ಬುಧವಾರ ಮಧ್ಯಾಹ್ನದ ವೇಳೆಗೆ ಮಳೆ ಒಂದಿಷ್ಟು ಬಿಡುವು ನೀಡಿದ್ದು ನದಿಗಳ ನೀರಿನ ಮಟ್ಟ ಇಳಿಯಲಾರಂಭಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News