ಹತ್ರಸ್ ಸಾಮೂಹಿಕ ಅತ್ಯಾಚಾರ ಪ್ರಕರಣ: ಸಿಬಿಐನಿಂದ ಮತ್ತೆ ಮೃತ ಯುವತಿಯ ತಂದೆ, ಸೋದರರ ವಿಚಾರಣೆ

Update: 2020-10-14 16:49 GMT

ಹತ್ರಸ್, ಅ.14: ಹತ್ರಸ್ ಪ್ರಕರಣದ ತನಿಖೆಯನ್ನು ಕೈಗೊಂಡಿರುವ ಸಿಬಿಐ ಬುಧವಾರ ಮೃತ ಯುವತಿಯ ತಂದೆ ಮತ್ತು ಇಬ್ಬರು ಸೋದರರನ್ನು ವಿಚಾರಣೆ ನಡೆಸಿದೆ. ಸಿಬಿಐ ತಂಡವು ಮಂಗಳವಾರವೂ ಅವರನ್ನು ಹತ್ರಸ್‌ನಲ್ಲಿಯ ತನ್ನ ಹಂಗಾಮಿ ಕಚೇರಿಯಲ್ಲಿ ಮತ್ತೊಮ್ಮೆ ವಿಚಾರಣೆಗೊಳಪಡಿಸಿತ್ತು.

ಸಿಬಿಐ ತಂಡವು ಸಂತ್ರಸ್ತ ಕುಟುಂಬದ ಮಹಿಳೆಯರನ್ನು ಬುಧವಾರ ಅವರ ಮನೆಯಲ್ಲಿಯೇ ಪ್ರಶ್ನಿಸಿದೆ ಎಂದು ಕುಟುಂಬವನ್ನು ನೋಡಿಕೊಳ್ಳುವ ಹೊಣೆ ಹೊತ್ತಿರುವ ಉಪ ವಿಭಾಗಾಧಿಕಾರಿ ಅಂಜಲಿ ಗಂಗ್ವಾರ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

ತನ್ಮಧ್ಯೆ ಅಲಿಗಡ ಜೈಲಿನಲ್ಲಿರುವ ಆರೋಪಿಗಳನ್ನು ಬೇರೊಂದು ಜೈಲಿಗೆ ವರ್ಗಾಯಿಸುವಂತೆ ಕುಟುಂಬ ಸದಸ್ಯರು ಆಗ್ರಹಿಸಿದ್ದಾರೆ.

‘ನನ್ನ ಪತಿ ಮಂಗಳವಾರ ಸಿಬಿಐ ತಂಡದೊಂದಿಗೆ ಘಟನಾ ಸ್ಥಳದಲ್ಲಿದ್ದರು. ಮೃತಳ ಸ್ಲಿಪರ್,ಬೂದಿ ಮತ್ತು ಇತರ ವಸ್ತುಗಳನ್ನು ಸಿಬಿಐ ವಶಪಡಿಸಿಕೊಂಡಿದೆ. ಆರೋಪಿಗಳನ್ನು ಅಲಿಗಡದಿಂದ ಬೇರೆ ಜೈಲಿಗೆ ರವಾನಿಸುವಂತೆ ನಾವು ಆಗ್ರಹಿಸುತ್ತಿದ್ದೇವೆ. ಅಲ್ಲಿ ಈ ಆರೋಪಿಗಳಿಗೆ ಯಾವುದೇ ಹೆದರಿಕೆಯಿಲ್ಲ, ಮನೆಯಲ್ಲಿದ್ದಂತೆಯೇ ಜೈಲಿನಲ್ಲಿಯೂ ಇದ್ದಾರೆ’ ಎಂದು ಮೃತ ಯುವತಿಯ ಅತ್ತಿಗೆ ಹೇಳಿದರು.

ಈ ಆಗ್ರಹಕ್ಕೆ ಧ್ವನಿಗೂಡಿಸಿದ ಮೃತಳ ಸೋದರ, ‘ನಾವು ಸಿಬಿಐ ಜೊತೆ ಸಹಕರಿಸುತ್ತಿದ್ದೇವೆ,ನಮಗೆ ಯಾವುದೇ ಭಯವಿಲ್ಲ’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News