ಕನಿಷ್ಠ 5 ತಿಂಗಳ ಕಾಲ ಕೊರೋನ ರೋಗನಿರೋಧತೆ ಅಬಾಧಿತ: ಅಧ್ಯಯನ

Update: 2020-10-14 16:52 GMT

ವಾಶಿಂಗ್ಟನ್, ಅ. 14: ಒಮ್ಮೆ ಕೋವಿಡ್-19 ಸೋಂಕಿಗೆ ಒಳಗಾದ ಬಳಿಕ, ಆ ರೋಗದ ವಿರುದ್ಧ ರೋಗಿಗಳ ದೇಹದಲ್ಲಿ ಉತ್ಪಾದನೆಯಾಗುವ ರೋಗನಿರೋಧತೆ ಕನಿಷ್ಠ 5 ತಿಂಗಳ ಕಾಲ ಇರುತ್ತದೆ ಎಂದು ಅಮೆರಿಕದಲ್ಲಿ ನಡೆದ ಅಧ್ಯಯನವೊಂದು ತಿಳಿಸಿದೆ. ನೋವೆಲ್ ಕೊರೋನ ವೈರಸ್ ಸೋಂಕಿಗೆ ಒಳಗಾದ ಸುಮಾರು 6,000 ಜನರಿಂದ ಪಡೆದ ಮಾದರಿಗಳಲ್ಲಿ ಪ್ರತಿಕಾಯಗಳು ಉತ್ಪಾದನೆಯಾಗುವ ಪ್ರಕ್ರಿಯೆಯ ಬಗ್ಗೆ ಆರಿರೆನ ವಿಶ್ವವಿದ್ಯಾನಿಲಯದ ಸಂಶೋಧಕರು ಅಧ್ಯಯನ ಮಾಡಿದ್ದಾರೆ.

‘‘ಕೋವಿಡ್-19 ಸೋಂಕಿನ ಐದರಿಂದ ಏಳು ತಿಂಗಳ ಬಳಿಕವೂ ಅತ್ಯುತ್ತಮ ಗುಣಮಟ್ಟದ ಪ್ರತಿಕಾಯಗಳು ಉತ್ಪಾದನೆಯಾಗುತ್ತಿರುವುದನ್ನು ನಾವು ಸ್ಪಷ್ಟವಾಗಿ ನೋಡುತ್ತಿದ್ದೇವೆ’’ ಎಂದು ಸಂಶೋಧನೆಯ ನೇತೃತ್ವ ವಹಿಸಿರುವ ಆರಿರೆನ ವಿಶ್ವವಿದ್ಯಾನಿಲಯದ ಭಾರತ ಮೂಲದ ಅಸೋಸಿಯೇಟ್ ಪ್ರೊಫೆಸರ್ ದೀಪ್ತಾ ಭಟ್ಟಾಚಾರ್ಯ ಹೇಳಿದರು.

‘‘ಕೋವಿಡ್-19 ವಿರುದ್ಧದ ರೋಗನಿರೋಧತೆ ಹೆಚ್ಚು ಕಾಲ ನಿಲ್ಲದಿರುವ ಬಗ್ಗೆ ಹಲವರು ಕಳವಳ ವ್ಯಕ್ತಪಡಿಸಿರುವುದನ್ನು ನಾವು ನೋಡಿದ್ದೇವೆ. ಇದನ್ನು ಪತ್ತೆಹಚ್ಚುವುದಕ್ಕಾಗಿ ನಾವು ಈ ಸಂಶೋಧನೆಯನ್ನು ಕೈಗೆತ್ತಿಕೊಂಡೆವು. ರೋಗನಿರೋಧತೆಯು ಕನಿಷ್ಠ 5 ತಿಂಗಳ ಕಾಲ ಸ್ಥಿರವಾಗಿ ಉಳಿಯುವುದನ್ನು ನಾವು ಪತ್ತೆಹಚ್ಚಿದ್ದೇವೆ’’ ಎಂದು ‘ಇಮ್ಯೂನಿಟಿ’ ಪತ್ರಿಕೆಯಲ್ಲಿ ಮಂಗಳವಾರ ಪ್ರಕಟಗೊಂಡ ಅಧ್ಯಯನ ವರದಿಯಲ್ಲಿ ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News