ಅಭಿವೃದ್ಧಿಶೀಲ ದೇಶಗಳಿಗೆ 12 ಬಿಲಿಯ ಡಾಲರ್ ಕೋವಿಡ್ ನೆರವು: ವಿಶ್ವಬ್ಯಾಂಕ್ ಘೋಷಣೆ

Update: 2020-10-14 17:06 GMT

ವಾಶಿಂಗ್ಟನ್, ಅ. 14: ಕೋವಿಡ್-19 ಲಸಿಕೆಗಳು ಮತ್ತು ಪರೀಕ್ಷಾ ಉಪಕರಣಗಳ ಖರೀದಿ ಹಾಗೂ ಚಿಕಿತ್ಸೆಯ ವೆಚ್ಚವನ್ನು ಭರಿಸುವುದಕ್ಕಾಗಿ ಅಭಿವೃದ್ಧಿಶೀಲ ದೇಶಗಳಿಗೆ 12 ಬಿಲಿಯ ಡಾಲರ್ (ಸುಮಾರು 87,900 ಕೋಟಿ ರೂಪಾಯಿ) ಸಾಲವನ್ನು ಮಂಜೂರು ಮಾಡಿರುವುದಾಗಿ ವಿಶ್ವಬ್ಯಾಂಕ್ ಮಂಗಳವಾರ ಹೇಳಿದೆ.

‘‘100 ಕೋಟಿಯಷ್ಟು ಜನರಿಗೆ ಲಸಿಕೆ ನೀಡುವ ಉದ್ದೇಶದಿಂದ ಈ ಸಾಲವನ್ನು ನೀಡಲಾಗುತ್ತಿದೆ’’ ಎಂದು ಬ್ಯಾಂಕ್ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಈ ಸಾಲವು, ಕೊರೋನ ವೈರಸ್ ಸಾಂಕ್ರಾಮಿಕದ ವಿರುದ್ಧ ಹೋರಾಡುವುದಕ್ಕಾಗಿ ಅಭಿವೃದ್ಧಿಶೀಲ ದೇಶಗಳಿಗೆ 2021ರ ಜೂನ್‌ವರೆಗೆ ನೀಡುವ 160 ಬಿಲಿಯ ಡಾಲರ್ (ಸುಮಾರು 11.72 ಲಕ್ಷ ಕೋಟಿ ರೂಪಾಯಿ) ಪ್ಯಾಕೇಜ್‌ನ ಭಾಗವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News