ಚಂದ್ರ ಸಂಶೋಧನೆಗಾಗಿ 8 ದೇಶಗಳಿಂದ ಒಪ್ಪಂದಕ್ಕೆ ಸಹಿ

Update: 2020-10-14 17:08 GMT

ವಾಶಿಂಗ್ಟನ್, ಅ. 14: ಭೂಮಿಯ ನೈಸರ್ಗಿಕ ಉಪಗ್ರಹ ಚಂದ್ರನ ಬಗ್ಗೆ ಸಂಶೋಧನೆ ನಡೆಸುವುದಕ್ಕಾಗಿ ಎಂಟು ದೇಶಗಳು ಅಂತರ್‌ರಾಷ್ಟ್ರೀಯ ಒಪ್ಪಂದವೊಂದಕ್ಕೆ ಸಹಿ ಹಾಕಿವೆ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ‘ನಾಸಾ’ ಮಂಗಳವಾರ ಪ್ರಕಟಿಸಿದೆ.

ಚಂದ್ರನ ಮೇಲೆ ಭವಿಷ್ಯದಲ್ಲಿ ದೀರ್ಘಾವಧಿ ಮಾನವ ವಸಾಹತುಗಳು ನಿರ್ಮಾಣಗೊಳ್ಳುವ ಸಾಧ್ಯತೆಯಿರುವುದರಿಂದ, ಅದಕ್ಕೆ ಪೂರಕವಾಗಿ ಸೂಕ್ತ ಮಾನದಂಡಗಳನ್ನು ಮತ್ತು ಅಂತರ್‌ರಾಷ್ಟ್ರೀಯ ಕಾನೂನುಗಳನ್ನು ರೂಪಿಸುವುದು ಈ ಒಪ್ಪಂದದ ಉದ್ದೇಶವಾಗಿದೆ.

‘ಸುರಕ್ಷಿತ ವಲಯ’ಗಳನ್ನು ನಿರ್ಮಿಸುವ ಮೂಲಕ ಈಗಾಗಲೇ ಅಸ್ತಿತ್ವದಲ್ಲಿರುವ ಅಂತರ್‌ರಾಷ್ಟ್ರೀಯ ಬಾಹ್ಯಾಕಾಶ ಕಾನೂನಿಗೆ ಸೇರ್ಪಡೆಗಳನ್ನು ಮಾಡುವ ಉದ್ದೇಶವನ್ನೂ ‘ಆರ್ಟಮಿಸ್ ಅಕಾರ್ಡ್ಸ್’ ಎಂದು ಕರೆಯಲ್ಪಡುವ ಈ ಒಪ್ಪಂದ ಹೊಂದಿದೆ.

ಭವಿಷ್ಯದಲ್ಲಿ ಚಂದ್ರನ ಮೇಲೆ ಕಾರ್ಯಾಚರಣೆಗಿಳಿಯುವ ವಿವಿಧ ದೇಶಗಳ ನಡುವೆ ಸಂಘರ್ಷ ಬಾರದಂತೆ, ಆಯಾಯ ದೇಶಗಳ ನೆಲೆಗಳ ಸುತ್ತ ‘ಸುರಕ್ಷಿತ ವಲಯ’ವನ್ನು ಸ್ಥಾಪಿಸುವುದು ಹಾಗೂ ಖಾಸಗಿ ಕಂಪೆನಿಗಳಿಗೆ ಚಂದ್ರನಲ್ಲಿ ಲಭಿಸುವ ಪ್ರಾಕೃತಿಕ ಸಂಪನ್ಮೂಲಗಳ ಗಣಿಗಾರಿಕೆ ನಡೆಸಲು ಅವಕಾಶ ನೀಡುವುದು ಈ ಅಂತರ್‌ರಾಷ್ಟ್ರೀಯ ಒಪ್ಪಂದದ ಉದ್ದೇಶವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News