×
Ad

ಮುಲಾಯಂ ಸಿಂಗ್ ಯಾದವ್ ಗೆ ಕೊರೋನ ಸೋಂಕು ದೃಢ

Update: 2020-10-14 22:58 IST

ಲಕ್ನೊ: ಸಮಾಜವಾದಿ ಪಕ್ಷದ ವರಿಷ್ಠ ಹಾಗೂ ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಆವರಿಗೆ (80 ವರ್ಷ) ಕೊರೋನ ಸೋಂಕು ದೃಢಪಟ್ಟಿದೆ ಎಂದು ಪಕ್ಷ ಬುಧವಾರ ಟ್ವೀಟ್ ಮೂಲಕ ತಿಳಿಸಿದೆ.

ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಗೆ ಕೋವಿಡ್-19 ಸೋಂಕು ತಗಲಿದೆ. ವೈದ್ಯರುಗಳು ಅವರ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಈಗ ಅವರಲ್ಲಿ ಯಾವುದೇ  ಸೋಂಕಿನ ಲಕ್ಷಣ ಇಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಮುಲಾಯಂ ಅವರ ಪತ್ನಿ ಸಾಧನಾ ಯಾದವ್ ಗೂ ಕೊರೋನ ಸೋಂಕು ತಗಲಿದೆ.

ಮುಲಾಯಂ ಸೆಪ್ಟಂಬರ್ 23ರಂದು ಕೊನೆಗೊಂಡಿರುವ ಮುಂಗಾರು ಸಂಸತ್ ಅಧಿವೇಶನದಲ್ಲಿ ಭಾಗವಹಿಸಿದ್ದರು. ಮುಲಾಯಂ ಪ್ರಸ್ತುತ ಉತ್ತರಪ್ರದೇಶದ ಮೈನ್ಪುರಿ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News