ಶಾಲಾ ಶಿಕ್ಷಣ ವ್ಯವಸ್ಥೆಯ ಸಬಲೀಕರಣಕ್ಕಾಗಿ ‘ಸ್ಟಾರ್ಸ್‌’ ಯೋಜನೆಗೆ ಕೇಂದ್ರ ಸಂಪುಟ ಅಸ್ತು

Update: 2020-10-14 17:50 GMT

ಹೊಸದಿಲ್ಲಿ, ಅ.14: ನೂತನ ಶಿಕ್ಷಣ ನೀತಿಯಡಿ ಶಾಲಾ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸುವುದಕ್ಕಾಗಿ ರಾಜ್ಯಗಳಿಗೆ ನೆರವಾಗುವುದಕ್ಕಾಗಿ ಕೇಂದ್ರ ಸಂಪುಟವು ಬುಧವಾರ ಮಹತ್ವಾಕಾಂಕ್ಷೆಯ ಸ್ಟಾರ್ಸ್‌ ಯೋಜನೆಗೆ ಅನುಮೋದನೆ ನೀಡಿದೆ.

ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಂಪುಟ ಸಭೆಯ ಬಳಿಕ ಕೇಂದ್ರ ಶಿಕ್ಷಣ ಸಚಿವ ಪ್ರಕಾಶ್ ಜಾವ್ಡೇಕರ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಮೋದಿ ಸರಕಾರವು ನೂತನ ಶಿಕ್ಷಣ ನೀತಿ-2020 ಅನ್ನು ಜಾರಿಗೊಳಿಸಲು ಆರಂಭಿಸಿದೆ. ಈ ಪ್ರಕ್ರಿಯೆಯ ಭಾಗವಾಗಿ ರಾಜ್ಯಗಳಿಗಾಗಿನ ಬೋಧನೆ-ಕಲಿಯುವಿಕೆ ಹಾಗೂ ಫಲಿತಾಂಶಗಳ ಬಲಪಡಿಸುವಿಕೆ (ಸ್ಟಾರ್ಸ್‌) ಯೋಜನೆಗೆ ಅದು ಅನುಮೋದನೆ ನೀಡಿದೆ ಎಂದರು.

ಶಾಲಾ ಶಿಕ್ಷಣದ ಫಲಿತಾಂಶಗಳನ್ನು ಅಭಿವೃದ್ಧಿಪಡಿಸುವ ಹಾಗೂ ಸುಧಾರಣೆಗೊಳಿಸುವುವ ಉದ್ದೇಶವನ್ನು ಸ್ಟಾರ್ಸ್‌ ಯೋಜನೆ ಹೊಂದಿದೆಯೆಂದು ಜಾವ್ಡೇಕರ್ ತಿಳಿಸಿದರು.

ಕೇಂದ್ರ ಶಿಕ್ಷಣ ಸಚಿವಾಲಯದ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯು ಈ ಯೋಜನೆಯನ್ನು ಅನುಷ್ಠಾನಕ್ಕೆ ತರಲಿದೆ. ಹಿಮಾಚಲಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ, ಮಧ್ಯಪ್ರದೇಶ, ಕೇರಳ ಹಾಗೂ ಓಡಿಶಾ ರಾಜ್ಯಗಳು ಈ ಯೋಜನೆಯ ವ್ಯಾಪ್ತಿಗೆ ಬರಲಿವೆ. ವಿಶ್ವ ಬ್ಯಾಂಕ್ ನೆರವಿನ ಈ ಯೋಜನೆಗೆ 5718 ಕೋಟಿ ರೂ. ತಗಲವುದೆಂದು ಅಂದಾಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News