×
Ad

ಫೈಹಾ ಕಾರ್ಯಕಾರಿ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ

Update: 2020-10-15 14:58 IST
ಅಬ್ದುಲ್ ಸಮದ್ ಅನ್ಸಾರಿ

ಉಪ್ಪಳ : ಇಲ್ಲಿನ ಪೈವಳಿಕೆಯಲ್ಲಿರುವ ಪಯ್ಯಕ್ಕಿ‌ ಉಸ್ತಾದ್ ಇಸ್ಲಾಮಿಕ್ ಅಕಾಡಮಿಯ ಪೂರ್ವ ವಿದ್ಯಾರ್ಥಿ ಸಂಘ 'ಫೈಹ' ಇದರ 2020-21 ನೇ ಸಾಲಿನ ಕಾರ್ಯಕಾರಿ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಪಯ್ಯಕ್ಕಿ ಅಕಾಡಮಿಯಲ್ಲಿ ನಡೆದ ಸಭೆಯಲ್ಲಿ ಪಿಯುಐ ಅಕಾಡಮಿ ಅಧ್ಯಕ್ಷ ಅಬ್ದುಲ್ ಮಜೀದ್ ದಾರಿಮಿ ಅಧ್ಯಕ್ಷತೆ ವಹಿಸಿದ್ದರು.

ಅಧ್ಯಕ್ಷರಾಗಿ ಅಬ್ದುಸ್ಸಮದ್ ಅನ್ಸಾರಿ, ಪ್ರ.ಕಾರ್ಯದರ್ಶಿಯಾಗಿ ಯಾಸಿರ್ ಅರಫಾತ್ ಅನ್ಸಾರಿ, ಝಮೀರ್ ಅನ್ಸಾರಿ ಫರಂಗಿಪೇಟೆ (ಖಜಾಂಜಿ), ಉಪಾಧ್ಯಕ್ಷರಾಗಿ ಅಬ್ದುನ್ನಾಸಿರ್ ಅನ್ಸಾರಿ ಸಜಿಪ, ನೂರುದ್ದೀನ್ ಅನ್ಸಾರಿ ಬದಿಯಡ್ಕ, ಕಾರ್ಯದರ್ಶಿಗಳಾಗಿ ತಮೀಂ ಅನ್ಸಾರಿ, ಅಬ್ದುರ್ರಹ್ಮಾನ್ ಅನ್ಸಾರಿ, ಕೊಆಡಿನೇಟರ್ ಜಾಬಿರ್ ಅನ್ಸಾರಿ ಮುಂತಾದವರನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷ     ಮೊಯಿದೀನ್ ಅನ್ಸಾರಿ ಬದಿಯಡ್ಕ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ನಿಝಾಮ್ ಅನ್ಸಾರಿ ಕಲ್ಲಡ್ಕ ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News