ಸಂಕಷ್ಟದಲ್ಲಿರುವ ಕುಟುಂಬಗಳಿಗೆ ನೆರವಾಗುವ ಉದ್ಯಮಿಗಳು ಸಮಾಜಕ್ಕೆ ಮಾದರಿ : ಅಬ್ದುಲ್ ಅಝೀಝ್ ದಾರಿಮಿ
ಮಂಗಳೂರು : ಕೊರೋನದಿಂದ ಸಂಕಷ್ಟದಲ್ಲಿರುವ ನೂರು ಕುಟುಂಬಗಳಿಗೆ ಆಹಾರ ವಸ್ತುಗಳ ಕಿಟ್ ವಿತರಿಸುವ ಕಾರ್ಯಕ್ರಮದ ಉದ್ಘಾಟನೆ ಯನ್ನು ಬಂದರಿನಲ್ಲಿರುವ ಸಮಸ್ತಾಲಯ ಕಚೇಯಲ್ಲಿ ನೆರವೇರಿಸಲಾಯಿತು.
ಕಾರ್ಯಕ್ರಮವನ್ನು ಕೆಬಿ ಅಬ್ದುಲ್ ಖಾದರ್ ದಾರಿಮಿ ಉದ್ಘಾಟಿಸಿದರು. ಜಿಲ್ಲಾ ಎಸ್ ವೈ ಎಸ್ ಅಧ್ಯಕ್ಷ ಅಬ್ದುಲ್ ಅಝೀಝ್ ದಾರಿಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಂತರ ಮಾತನಾಡಿದ ಅವರು ಕೊರೋನ ಕಾರಣ ಸಂಕಷ್ಟಕ್ಕೆ ಒಳಗಾದ ನೂರು ಕುಟುಂಬಗಳಿಗೆ ನೆರವಾಗಲು ಒಬ್ಬರು ದಾನಿ ಕಾರಣವಾಗಿದ್ದಾರೆ. ಕೆಲಸವಿಲ್ಲದೇ ಕಷ್ಟದಲ್ಲಿದ್ದ ಒಬ್ಬರ ಕಣ್ಣೀರು ಕಂಡು ಮರುಗಿದ ಆ ಉದ್ಯಮಿಯು ಇಂತಹಾ ನಿರ್ಧಾರಕ್ಕೆ ಬಂದಿದ್ದಾರೆ. ಇದು ಎಲ್ಲಾ ಶ್ರೀಮಂತ ಉದ್ಯಮಿಗಳಿಗೆ ಮಾದರಿ ಎಂದು ವಿವರಿಸಿದರು.
ಕಾರ್ಯಕ್ರಮ ದಲ್ಲಿ ಹಕೀಮ್ ಪರ್ತಿಪ್ಪಾಡಿ ಶುಭಾ ಕೋರಿದರು. ಜಿಲ್ಲಾ ಎಸ್ ವೈ ಎಸ್ ಕಾರ್ಯದರ್ಶಿ ಕೆ ಎಲ್ ಉಮರ್ ದಾರಿಮಿ ಸ್ವಾಗತಿಸಿದರು. ಕಾರ್ಯಕ್ರಮ ದಲ್ಲಿ ಮುಸ್ತಫಾ ಫೈಝಿ ಕಿನ್ಯ, ನಾಸಿರ್ ಕೌಸರಿ, ರಿಯಾಝ್ ಹಾಜಿ ಬಂದರು, ಝಾಕಿರ್ ಉಪಸ್ಥಿತರಿದ್ದರು.
ಮಂಗಳೂರು ವಲಯದಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಉಸ್ತಾದರಿಗೆ ಅಹಾರ ಕಿಟ್ ವಿತರಿಸಲಾಯಿತು.
ಎಸ್ ವೈ ಎಸ್ ಜಿಲ್ಲಾ ಸಮಿತಿ ವತಿಯಿಂದ ಜಿಲ್ಲೆಯ ಉಳಿದ ಕಡೆ ಉಸ್ತಾದರಿಗೆ ಕಿಟ್ ವಿತರಿಸುವ ದಿನಾಂಕ
ಪುತ್ತೂರು 17/10/2020
ಸ್ಥಳ: ಬದ್ರ್ ಮಸೀದಿ ಪುತ್ತೂರು
ಸಮಯ: 11 ಗಂಟೆ
ಸುಳ್ಯ 19/10/2020
ಸ್ಥಳ: ಸುನ್ನೀ ಮಹಲ್.ಸುಳ್ಯ
ಸಮಯ: ಬೆಳಗ್ಗೆ 10
ಬಂಟ್ವಾಳ 19/10/2020
ಸಮಯ : ಬೆಳಗ್ಗೆ 9
ಸ್ಥಳ ಮಿತ್ತಬೈಲ್ ಮದ್ರಸ
ವಿಟ್ಲ 16.10.2020
ಸ್ಥಳ: ವಿಟ್ಲ ಸುಪರ್ ಬಜಾರ್ ನ ಸಮೀಪ
ಸಮಯ: ಬೆಳಗ್ಗೆ 9.30 ಗಂಟೆ
ಉಪ್ಪಿನಂಗಡಿ 18.10.2020
ಸ್ಥಳ: ಉಪ್ಪಿನಂಗಡಿ ಜುಮಾ ಮಸೀದಿ
ಸಮಯ: ಬೆಳಗ್ಗೆ 9 ಗಂಟೆ