×
Ad

ಬ್ರಹ್ಮಾವರದಲ್ಲಿ ರೈತ ಮಹಿಳಾ ದಿನಾಚರಣೆ

Update: 2020-10-15 21:09 IST

ಉಡುಪಿ, ಅ.15:ಕೃಷಿಯಲ್ಲಿರುವ ತೊಡಕುಗಳು ಹಾಗೂ ಈ ತೊಡಕುಗಳ ನಿವಾರಣೆಗೆ ಮತ್ತು ಅದರ ಅಭಿವೃದ್ಧಿಗೆ ಪರ್ಯಾಯ ವ್ಯವಸ್ಥೆಯಾಗಿ ಕೃಷಿ ಉತ್ಪನ್ನ ಮಾರುಕಟ್ಟೆಯ ಅವಶ್ಯಕತೆ, ಕೃಷಿ ಉಪಕಸುಬುಗಳ ಅಳವಡಿಕೆ, ಪಶು ಸಂಗೋಪನೆ ಮಹತ್ವವನ್ನು ರೈತ ಮಹಿಳೆಯರಿಗೆ ಮನದಟ್ಟು ಮಾಡಿಕೊಡುವಂತೆ ಉಡುಪಿ ಜಿಪಂ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ ಕರೆ ನೀಡಿದ್ದಾರೆ.

ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಭಾರತೀಯ ಕೃಷಿ ಅನುಸಂಧಾನ ಪರಿಷತ್ ನವದೆಹಲಿ, ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಡುಪಿ ಜಿಲ್ಲೆ ಮತ್ತು ಶಿಶು ಅಭಿವೃದ್ಧಿ ಯೋಜನೆ ಬ್ರಹ್ಮಾವರ ಇವರ ಸಂಯುಕ್ತ ಆಶ್ರಯದಲ್ಲಿ ಆರೂರು ಗ್ರಾಮದ ಬಯಲು ರಂಗ ಮಂದಿರದಲ್ಲಿ ಗುರುವಾರ ನಡೆದ ರೈತ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬ್ರಹ್ಮಾವರ ತಾಪಂ ಸದಸ್ಯೆ ನಳಿನಿ ಪ್ರದೀಪ್ ರಾವ್ ಮಾತನಾಡಿ, ಮಹಿಳೆಯರು ಕೃಷಿಯಲ್ಲಿ ಯಾವ ರೀತಿ ಯಾಗಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಹಾಗೂ ಮನೆಯಲ್ಲಿರುವ ತ್ಯಾಜ್ಯಗಳ ಸಮರ್ಪಕ ನಿರ್ವಹಣೆ ಮಾಡಿ ಪರಿಸರವನ್ನು ಹೇಗೆ ತ್ಯಾಜ್ಯ ಮುಕ್ತವಾಗಿಸಬೇಕು ಎಂಬ ಬಗ್ಗೆ ವಿವರಿಸಿದರು.

ಬ್ರಹ್ಮಾವರ ಪ್ರಭಾರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕೆ. ಲೀಲಾವತಿ ಮಾತನಾಡಿ, ವಾಣಿಜ್ಯಕರಣದಿಂದಾಗಿ ಕೃಷಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಉತ್ತಮ ಆರೋಗ್ಯಕ್ಕಾಗಿ ಮಹಿಳೆಯರು ಮನೆಯಲ್ಲಿ ಸ್ವಂತ ಕೈತೋಟವನ್ನು ಅಳವಡಿಸಿಕೊಳ್ಳುವಂತೆ ತಿಳಿಸಿದರು.

ಆರೂರು ಗ್ರಾಪಂ ಕಾರ್ಯದರ್ಶಿ ಗುರುರಾಜ್,ಪೇತ್ರಿ ವಲಯ ಅಂಗನವಾಡಿ ಮೇಲ್ವಿಚಾರಕಿ ವನಿತಾ ಎಸ್ ಹೆಗ್ಡೆ ಕಾರ್ಯಕ್ರಮದಲ್ಲಿ ಉಪಸ್ಥಿತರಿ ದ್ದರು. ಹಿರಿಯ ವಿಜ್ಞಾನಿ ಡಾ.ಬಿ ಧನಂಜಯ ಸ್ವಾಗತಿಸಿದರು. ಡಾ.ಸಚಿನ್ ಯು. ಎಸ್ ಕಾರ್ಯಕ್ರಮ ನಿರೂಪಿಸಿದರು. ಡಾ. ಜಯಪ್ರಕಾಶ್ ವಂದಿಸಿದರು. ಕಾರ್ಯಕ್ರಮದಲ್ಲಿ 50 ಮಂದಿ ರೈತ ಮಹಿಳೆಯರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News