ಉಡುಪಿ: ಅಕ್ರಮ ಗಾಂಜಾ ವಶ, ನಾಲ್ಕು ಮಂದಿ ಆರೋಪಿಗಳು ಸೆರೆ
Update: 2020-10-15 21:28 IST
ಉಡುಪಿ, ಅ.15: ಜಿಲ್ಲೆಯಲ್ಲಿ ಅಬಕಾರಿ ಇಲಾಖೆಯು ಅಕ್ಟೋಬರ್ ತಿಂಗಳಲ್ಲಿ ನಿನ್ನೆಯವರೆಗೆ ಅಬಕಾರಿ ಕಾಯ್ದೆ 1965ರ ಕಲಂ 32 ರಡಿ 4 ಪ್ರಕರಣ, ಎನ್‌ಡಿಪಿಎಸ್ 1985 ಕಾಯ್ದೆಯಡಿ 4 ಪ್ರಕರಣ ದಾಖಲಿಸಿ, 429 ಗ್ರಾಂ ಗಾಂಜಾ, 29.520 ಲೀ ಅಕ್ರಮ ಮದ್ಯ, 19.500 ಲೀ.ಗೋವಾ ಮದ್ಯ ಹಾಗೂ 5 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡು ಪ್ರಕರಣಕ್ಕೆ ಸಂಬಂಧಿಸಿದ 4 ಮಂದಿ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಿದೆ.
ವಶಪಡಿಸಿಕೊಂಡ ಸೊತ್ತುಗಳ ಅಂದಾಜು ಮೌಲ್ಯ 3 ಲಕ್ಷ ರೂ.ಗಳೆಂದು ಉಡುಪಿ ಜಿಲ್ಲಾ ಅಬಕಾರಿ ಉಪ ಆಯುಕ್ತರ ಪ್ರಕಟಣೆ ತಿಳಿಸಿದೆ.